ಭಾಷೆಯ ಕಿಡಿ ಹೊತ್ತಿಸಿದ್ದ ವಿಂಗ್ ಕಮಾಂಡರ್ ಮೇಲೆ ಎಫ್‌ಐಆರ್: ಸ್ವಿಗ್ಗಿ ಹುಡುಗನ ಮೇಲೆ ಅಟ್ಟಹಾಸ ಮೆರೆದಿದ್ದ ವಾಯುಪಡೆ ಅಧಿಕಾರಿ

Share It

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ, ಭಾಷೆಯ ಕಾರಣಕ್ಕೆ ಸೈನಿಕನನ್ನು ಥಳಿಸಲಾಗಿದೆ ಎಂದು ಬಿಂಬಿಸಿದ್ದ ವಾಯುಪಡೆ ಅಧಿಕಾರಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಆತನ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಸೋಮವಾರ ನಡೆದ ಘಟನೆಯಲ್ಲಿ ವಾಯುಪಡೆ ಅಧಿಕಾರಿ ಸ್ವಿಗ್ಗಿ ಡೆಲಿವೆರಿ ಯುವಕನ ಮೇಲೆ ಹಲ್ಲೆ ನಡೆಸಿದ್ದು, ಸಿಸಿಟಿವಿ ದೃಶ್ಯಾವಳಿಯಿಂದ ತಿಳಿದುಬಂದಿದೆ. ಆತನ ವರ್ತನೆ ಮತ್ತು ಅಟ್ಟಹಾಸ ಸೆರೆಯಾಗಿದ್ದು, ಇದನ್ನಿಟ್ಟುಕೊಂಡು ಸಂತ್ರಸ್ತ ವಿಕಾಸ್ ದೂರು ನೀಡಿದ್ದಾರೆ. ಈ ದೂರಿನ ಅನ್ವಯ ಬೈಯ್ಯಪ್ಪನಹಳ್ಳಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.

ಘಟನೆಯಲ್ಲಿ ತಾನು ಗಂಭೀರವಾಗಿ ಗಾಯಗೊಂಡಿದ್ದು, ಸೈನಿಕನೊಬ್ಬನ ಮೇಲೆ ಬೆಂಗಳೂರಿನಲ್ಲಿ ಕನ್ನಡ ಮಾತನಾಡುವ ಸಂಬAಧ ಹಲ್ಲೆ ನಡೆದಿದೆ. ನಾನು ಬಹಳ ಸಂಯಮದಿAದ ವರ್ತಿಸಿದರೂ, ನನ್ನ ಹೆಂಡತಿ ಜತೆಯಲ್ಲಿದ್ದಾಗ ನನ್ನ ಮೇಲೆ ಹಲ್ಲೆಯಾಗಿದೆ ಎಂದು ವಿಡಿಯೋದಲ್ಲಿ ಶಿಲಾದಿತ್ಯ ಬೋಸ್ ಹೇಳಿಕೊಂಡಿದ್ದರು. ಇದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿತ್ತು.

ಉತ್ತರ ಭಾರತೀಯರು ಹಾಗೂ ಕೆಲವು ನೆಟ್ಟಿಗರು ಸೈನಿಕನ ಮೇಲೆ ನಡೆದಿರುವ ಹಲ್ಲೆಗೆ ವ್ಯಾಪಕ ವಿರೋಧ ವ್ಯಕ್ತಪಡಿಸಿದರು. ಈ ಸಂಬAಧ ಪೊಲೀಸರು ತನಿಖೆಗೆ ಮುಂದಾದಾಗ ಬೈಕ್ ಸವಾರ ಬಿಚ್ಚಿಟ್ಟ ಸತ್ಯಗಳು ವಿಂಗ್ ಕಮಾಂಡರ್‌ಗೆ ಸಂಕಷ್ಟ ತಂದೊಡ್ಡಿವೆ. ಜತೆಗೆ, ಘಟನೆಯ ಸುತ್ತಲಿನ ಸಿಸಿಟಿವಿ ದೃಶ್ಯಾವಳಿಗಳು ವಿಂಗ್ ಕಮಾಂಡರ್ ನಡೆಸಿರುವ ದಾಳಿಯ ಅಟ್ಟಹಾಸವನ್ನು ತೆರೆದಿಟ್ಟಿವೆ.

ಘಟನೆಯು ಭಾಷಾ ವಿವಾದ ಪಡೆದುಕೊಳ್ಳುವಂತೆ ಮಾಡಿದ್ದ ವಿಂಗ್ ಕಮಾಂಡರ್ ಕನ್ನಡ ಹೋರಾಟಗಾರರ ಆಕ್ರೋಶಕ್ಕೂ ಕಾರಣವಾಗಿದ್ದು, ಸಂತ್ರಸ್ತ ವಿಕಾಸ್ ಪರವಾಗಿ ಕನ್ನಡಪರ ಸಂಘಟನೆಗಳು ಹಾಗೂ ಸ್ಥಳೀಯ ಹೋರಾಟಗಾರರು ಕೈಜೋಡಿಸಿದ್ದಾರೆ. ಸೈನಿಕ ಎಂದ ಮಾತ್ರಕ್ಕೆ ಸಾರ್ವಜನಿಕರೊಂದಿಗೆ ಮೃಗೀಯ ವರ್ತನೆ ತೋರುವುದು ಸರಿಯಲ್ಲ ಎಂದು ಟೀಕಿಸಿ, ಆತನ ಮೇಲೆ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಕೈಗೊಂಡಿದ್ದು ವಿಂಗ್ ಕಮಾಂಡ್ ಬೋಸ್ ಮತ್ತು ಆತನ ಪತ್ನಿ ಹಾಗೂ ಡೆಲೆವರಿ ಬಾಯಸ್ ವಿಕಾಸ್ ಕುಮಾರ್ ಹಾಗೂ ಸ್ಥಳೀಯರನ್ನು ವಿಚಾರಣೆ ನಡೆಸುತ್ತಿದ್ದಾರೆ.


Share It

You May Have Missed

You cannot copy content of this page