ನವದೆಹಲಿ: ಸತತ ನಾಲ್ಕು ದಿನಗಳಿಂದ ಏರಿಕೆ ಕಾಣುತ್ತಿರುವ ಚಿನ್ನದ ಬೆಲೆ ಇದೀಗ ಸಾರ್ವಕಾಲಿಕ ಗರಿಷ್ಠ ಬೆಲೆಗೆ ತಲುಪಿದೆ. ಮಂಗಳವಾರ 1,899ರೂ. ಏರಿಕೆ ಕಾಣುವ ಮೂಲಕ 10 ಗ್ರಾಂ ಚಿನ್ನದ ಬೆಲೆ 99,178 ಆಗಿದೆ.
ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ನಲ್ಲಿ, ಜೂನ್‌ನಲ್ಲಿ ಹೆಚ್ಚು ವಹಿವಾಟು ನಡೆದ ಚಿನ್ನದ ವಿತರಣಾ ಒಪ್ಪಂದಗಳು ಆರಂಭಿಕ ವಹಿವಾಟಿನಲ್ಲಿ 10 ಗ್ರಾಂಗಳಿಗೆ 1,899 ರೂ. ಅಥವಾ ಶೇ 2ರಷ್ಟು ಏರಿಕೆ ಕಂಡಿದ್ದು ಸದ್ಯ 99,178 ರೂ.ಗಳ ದಾಖಲೆಯ ಗರಿಷ್ಠ ಮಟ್ಟವನ್ನು ತಲುಪಿದೆ.
ಜೂನ್ ವಹಿವಾಟಿನ ಒಪ್ಪಂದದಲ್ಲಿ 10 ಗ್ರಾಂ ಚಿನ್ನ 98,880 ರೂ.ಗಳಲ್ಲಿ ವಹಿವಾಟು ನಡೆಸಿತು. ಆಗಸ್ಟ್ನ ಒಪ್ಪಂದದಲ್ಲಿ 1,848 ಅಥವಾ 1.89ರಷ್ಟು ಏರಿಕೆ ಕಂಡಿದ್ದು, 10 ಗ್ರಾಂ ಬಂಗಾರದ ಬಲೆ 99,800 ರೂಗೆ ಬಂದಿದೆ.
ಜತೆಗೆ ಅಕ್ಟೋಬರ್ ಒಪ್ಪಂದದಲ್ಲಿ ಎಂಸಿಎಕ್ಸ್ನಲ್ಲಿ ಇದೇ ಮೊದಲ ಬಾರಿಗೆ ₹1 ಲಕ್ಷದ ಗಡಿ ದಾಟಿದೆ. 2000 ಅಥವಾ ಶೇ 2ರಷ್ಟು ಏರಿಕೆ ಕಾಣುವ ಮೂಲಕ ಅಧಿಕ ಮೌಲ್ಯಕ್ಕೆ ಅಂದರೆ 10 ಗ್ರಾಂ ಚಿನ್ನದ ದರ 1,00,484 ರೂ. ಆಗಿದೆ.
ಹಳದಿ ಲೋಹದ ಬೆಲೆ ಈ ರೀತಿ ಏರಿಕೆ ಕಾಣಲು ಕಾರಣ ಅಮೆರಿಕದ ಹಣಕಾಸು ನೀತಿಯಾಗಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಫೆಡರಲ್ ರಿಸರ್ವ್ ಯೋಜನೆ ಪರಿಶೀಲಿಸಿ ಅನಾವರಣಗೊಳಿಸಿದ್ದಾರೆ. ಜಾಗತಿಕ ಮಟ್ಟದಲ್ಲಿ ಬಂಗಾರದ ಬೆಲೆ ಗಮನಾರ್ಹ ಏರಿಕೆ ಕಂಡಿದ್ದು, ಔನ್ಸ್ಗೆ 3,504.12 ಅಮೆರಿಕನ್ ಡಾಲರ್ ಆಗಿದೆ.

