ಬೆಂಗಳೂರು: ವಿದೇಶದಿಂದ ಅಕ್ರಮವಾಗಿ ಚಿನ್ನ ಕಳ್ಳ ಸಾಗಾಣಿಕೆ ಮಾಡಿದ ಆರೋಪ ಪ್ರಕರಣದಲ್ಲಿ ಆರೋಪಿಯಾಗಿ ಬಂಧಿತರಾಗಿರುವ ನಟಿ ರನ್ಯಾ ರಾವ್ ಅವರಿಗೆ ಜಾಮೀನು ನೀಡಲು ಹೈಕೋರ್ಟ್ ಮತ್ತೆ ನಿರಾಕರಿಸಿದೆ.
ಇಂದು ಹೈಕೋರ್ಟ್ ನ್ಯಾ.ಎಸ್.ವಿಶ್ವನಾಥ್ ಶೆಟ್ಟಿ ಅವರು ಷರತ್ತುಬದ್ಧ ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಹೇಳಿ ನಟಿ ರನ್ಯಾ ರಾವ್ ಜಾಮೀನು ಅರ್ಜಿಯನ್ನು ವಜಾಗೊಳಿಸಿದರು. ಜೊತೆಗೆ ಇನೊಬ್ಬ ಬಂಧಿತ ಆರೋಪಿ ಕರುಣ್ ರಾಜಾ ಅವರ ಜಾಮೀನು ಅರ್ಜಿಯನ್ನು ಸಹ ಹೈಕೋರ್ಟ್ ವಜಾಗೊಳಿಸಿತು.
ಇದರಿಂದ ಈ ಇಬ್ಬರೂ ಬಂಧಿತ ಆರೋಪಿಗಳು ಯುಎಇ ಸೇರಿದಂತೆ ವಿದೇಶಗಳಿಂದ ಭಾರತಕ್ಕೆ ಚಿನ್ನದ ಕಳ್ಳ ಸಾಗಿಸಿದ ಆರೋಪ ಪ್ರಕರಣದಲ್ಲಿ ಜೈಲಿನಲ್ಲೇ ಇರಬೇಕಾಗಿದೆ.

