ಇಂದೋರ್: ಮಧ್ಯಪ್ರದೇಶದ ಮಂದ್ಸೌರ್ ಜಿಲ್ಲೆಯಲ್ಲಿ ಬೈಕ ಗೆ ವ್ಯಾನೊಂದು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು, ವ್ಯಾನ್ ರಸ್ತೆಯಿಂದ ಹೊರಕ್ಕೆ ಉರುಳಿಬಿದ್ದು 10ಜನರು ಸಾವನ್ನಪ್ಪಿದ್ದಿರುವ ಘಟನೆ ನಡೆದಿದೆ.
ನೀಮಚ್‌ನ ಮಾನಸದ ಆಂತರಿ ಮಾತಾ ದೇವಸ್ಥಾನಕ್ಕೆ ಹೋಗುತ್ತಿದ್ದ ವ್ಯಾನ್, ಬೈಕ್ ಸವಾರನಿಗೆ ಡಿಕ್ಕಿ ಹೊಡೆಯಿತು. ಪರಿಣಾಮವಾಗಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಅನಂತರ ವ್ಯಾನ್ ರಸ್ತೆಯಿಂದ ಹೊರಗೆ ಬಂದು, ತೆರದ ಬಾವಿಯೊಳಕ್ಕೆ ಬಿದ್ದಿದೆ. ಈ ಪರಿಣಾಮ ವ್ಯಾನ್‌ನಲ್ಲಿದ್ದ 12 ಜನರು ಪ್ರಾಣಬಿಟ್ಟಿದ್ದಾರೆ.
ಘಟನೆಯನ್ನು ಗಮನಿಸಿದ ಗ್ರಾಮಸ್ಥರು ಬಾವಿಯಲ್ಲಿ ಸಿಲುಕಿದ್ದ ಮೂವರು ಪ್ರಯಾಣಿಕರು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಈ ವೇಳೆ ರಕ್ಷಣೆಗೆ ಮುಂದಾಗಿದ್ದ ಸ್ಥಳೀಯರ ಪೈಕಿ 42 ವರ್ಷದ ವ್ಯಕ್ತಿಯೊಬ್ಬ ಬಾವಿಯೊಳಗೆ ಉಸಿರುಗಟ್ಟಿ ಪ್ರಾಣಬಿಟ್ಟಿದ್ದಾರೆ ಎಂದು ವರದಿಯಾಗಿದೆ.
ಮೂರು ವರ್ಷದ ಬಾಲಕಿ ಹಾಗೂ 10 ವರ್ಷದ ಬಾಲಕ ಸೇರಿ ಗಾಯಗೊಂಡಿರುವ ನಾಲ್ವರನ್ನು ಮಂದ್ಸೌರ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಜಿಕಿತ್ಸೆ ಕೊಡಿಸಲಾಗುತ್ತಿದೆ. ಜಿಲ್ಲಾಡಳಿತ ಮೃತರ ಕುಟುಂಬಕ್ಕೆ ತಲಾ ಎರಡು ಲಕ್ಷ ರು. ಹಾಗೂ ಗಾಯಗೊಂಡವರಿಗೆ ತಲಾ 50 ಸಾವಿರ ರುಪಾಯಿಗಳ ಪರಿಹಾರವನ್ನು ಘೋಷಣೆ ಮಾಡಿದೆ..