ಉಪಯುಕ್ತ ಸುದ್ದಿ

ಸಮಕಾಲೀನ ಪರಿಸ್ಥಿತಿಯಲ್ಲಿ ಬಸವಣ್ಣನವರ ಚಿಂತನೆಗಳು ಸೂಕ್ತವೇ?: ಹೀಗೊಂದು ಚಿಂತನೆ

Share It

ಉತ್ತರ ಕನ್ನಡ: ಮುಂಡಗೋಡನಲ್ಲಿ ದಿನಾಂಕ 29/04/ 2025ರ ಮಂಗಳವಾರದಂದು ಭೂವಿಕಾಸ ಪ್ರತಿಷ್ಠಾನ ಮುಂಡಗೋಡ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಡಗೋಡ ಇವರ ಸಂಯುಕ್ತ ಆಶ್ರಯದಲ್ಲಿ ಸಮಕಾಲೀನ ಪರಿಸ್ಥಿತಿಯಲ್ಲಿ ಬಸವಣ್ಣನವರ ಚಿಂತನೆಗಳು ಸೂಕ್ತವೇ (ಪರ-ವಿರೋಧವಾಗಿ)ಎಂಬ ವಿಷಯದ ಮೇಲೆ ಚರ್ಚಾ ಸ್ಪರ್ಧೆ ಏರ್ಪಡಿಸಿದ್ದು, ಕಾಲೇಜಿನ ಪ್ರಾಚಾರ್ಯರಾದ ಪ್ರಸನ್ನ ಸಿಂಗ ಹಜೇರಿ ಅವರು ಅಧ್ಯಕ್ಷತೆಯಲ್ಲಿ ಉಪನ್ಯಾಸಕರಾಗಿ ಆಗಮಿಸಿದ ಡಾ. ಸರಸ್ವತಿ ದೇವಿ. ಎಸ್. ರವರು ಸಮಕಾಲಿನ ಸಂದರ್ಭದಲ್ಲಿ ಬಸವಣ್ಣನವರ ಚಿಂತನೆಗಳು ಬೇಕೇ ಬೇಕು ಅವುಗಳಿಲ್ಲದಿದ್ದರೆ ಜೀವನ ನಿರರ್ಥಕ ಎಂಬುದನ್ನು ಮಾರ್ಮಿಕವಾಗಿ ನುಡಿದರು.

ಉದ್ಘಾಟನೆಯನ್ನು ಮಹಾದೇಶ್ವರ ಬಿ ಲಿಂಗದಾಳ್ ಅಧ್ಯಕ್ಷರು, ಭೂವಿಕಾಸ ಪ್ರತಿಷ್ಠಾನ ರವರು ನೆರವೇರಿಸಿದರು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿಬಸವರಾಜ್ ನಡುವಿನಮನಿ ರಾಜ್ಯ ಕೃಷಿ ಪ್ರಶಸ್ತಿ ವಿಜೇತರು ಭಾಗವಹಿಸಿ ವಚನ ಸಾಹಿತ್ಯವು ಅಮೂಲ್ಯವಾದ ಗಣಿ ಎಂದು ಮಾತನಾಡಿದರು.

ಭೂವಿಕಾಸ ಪ್ರತಿಷ್ಠಾನದ ಕಾರ್ಯದರ್ಶಿಯಾದ ಸಂತೋಷ ಕುಸನೂರ , ಮುಖ್ಯ ಅತಿಥಿಗಳಾಗಿ ಬಸವರಾಜ್ ಓಶೀಮಠ, ಸಾಂಸ್ಕೃತಿಕ ಸಂಚಾಲಕರಾದ ನಾಗರಾಜ್ ಹರಿಜನ್ ಹಾಗೂ ಕನ್ನಡ ವಿಭಾಗದ ಮಲ್ಲಿಕಾರ್ಜುನ ಮತ್ತು ಡಾ.ಅನುಪಮಾ ಅಧ್ಯಾಪಕರು ಉಪಸ್ಥಿತರಿದ್ದರು. ವಿದ್ಯಾರ್ಥಿನಿಯಾದ ಪರ್ವೀನಾ ನಿರೂಪಿಸಿದರು. ಅಧ್ಯಾಪಕಿಯರಾದ ಡಾ.ಅನುಪಮಾ ಆಲಾಪುರ ಅವರು ವಂದಿಸಿದರು.


Share It

You cannot copy content of this page