ನರೇಂದ್ರ ಮೋದಿ ಅವರ ರಷ್ಯಾ ಪ್ರವಾಸ ರದ್ದು: ಕುತೂಹಲ ಕೆರಳಿಸಿದ ಮೋದಿ ನಡೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ರಷ್ಯಾ ಪ್ರವಾಸ ದಿಡೀರ್ ರದ್ದಾಗಿದ್ದು, ಈ ನಡೆ ಇದೀಗ ಅಚ್ಚರಿ ಮೂಡಿಸಿದೆ.
ಪಹಲ್ಗಾಮ್ ಉಗ್ರರ ದಾಳಿಯ ಹಿನ್ನೆಲೆಯಲ್ಲಿ ಇದೀಗ ದೇಶದ ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿದೆ. ಪಾಕಿಸ್ತಾನ ಯುದ್ದಕ್ಕೆ ಸಿದ್ಧವಾದಂತೆ ತುದಿಗಾಲ ಮೇಲೆ ನಿಂತಿದೆ. ಗಡಿಯಲ್ಲಿ ಆಗಾಗ ಅಪ್ರಚೋದಿತ ಗುಂಡಿನ ದಾಳಿಯನ್ನು ಪಾಕಿಸ್ತಾನದ ಸೈನಿಕರು ಮಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಮೋದಿ ಅವರ ರಷ್ಯಾ ಪ್ರವಾಸ ಮೊಟುಕುಗೊಂಡಿರುವುದು ಅಚ್ಚರಿಗೆ ಕಾರಣವಾಗಿದೆ.
ಪಾಕಿಸ್ತಾನದ ಮೇಲೆ ಈಗಾಗಲೇ ರಾಜತಂತ್ರಿಕ ಯುದ್ಧ ಆರಂಭಿಸಿರುವ ಭಾರತ, ಯುದ್ಧ ನಡೆಸಲು, ಉಗ್ರರನ್ನು ಮಟ್ಟಹಾಕಲು ಎಲ್ಲ ಸಿದ್ಧತೆಗಳನ್ನು ನಡೆಸುತ್ತಿದೆ. ಈ ಸಂದರ್ಭದಲ್ಲಿ ಪ್ರಧಾನಿ ವಿದೇಶ ಪ್ರವಾಸ ಬೇಡ ಎಂಬ ಕಾರಣಕ್ಕೆ ಮೇ.9ರಂದು ರಷ್ಯಾಗೆ ತೆರಳಬೇಕಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ತಮ್ಮ ಪ್ರವಾಸವನ್ನು ರದ್ದುಗೊಳಿಸಿದ್ದಾರೆ ಎನ್ನಲಾಗುತ್ತಿದೆ.


