ಅಮೇರಿಕದಲ್ಲಿ ಹೆಂಡತಿ ಮಗನನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ಕರ್ನಾಟಕದ ಟೆಕ್ಕಿ
ಮಂಡ್ಯ: ಕರ್ನಾಟಕದ ಟೆಕ್ಕಿಯೊಬ್ಬರು ವಾಷಿಂಗ್ಟನ್‌ನ ನ್ಯೂ ಕ್ಯಾಸಲ್‌ನ ತಮ್ಮ ಮನೆಯಲ್ಲಿ ತಮ್ಮ ಮಡದಿ ಹಾಗೂ ಮಗನಿಗೆ ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಗ್ರಾಮದ ಹರ್ಷವರ್ದನ್ ಕಿಕ್ಕೇರಿ ಮೈಸೂರಿನಲ್ಲಿ ಹೋಲೋವರ್ಲ್ಡ್ ಎಂಬ ರೋಬೋಟಿಕ್ ಕಂಪನಿ ಸ್ಥಾಪನೆ ಮಾಡಿದ್ದರು. ಕಂಪನಿ ಕೋವಿಡ್ ಸಂದರ್ಭದಲ್ಲಿ ಮುಚ್ಚಿ ಹೋದಾಗ ಅಮೇರಿಕಕ್ಕೆ ತೆರಳಿ ಅಲ್ಲಿಯೇ ನೆಲೆ ಕಂಡುಕೊಂಡಿದ್ದರು.
2022ರಿಂದ ಅಮೇರಿಕದಲ್ಲಿಯೇ ನೆಲೆಸಿದ್ದ ಹರ್ಷವರ್ದನ್ ತಮ್ಮ ಪತ್ನಿ ಶ್ವೇತಾ(41) ಹಾಗೂ 14 ವರ್ಷದ ಮಗನನ್ನು ಗುಂಡಿಕ್ಕಿ ಕೊಂಡಿದ್ದಾರೆ. ಅನಂತರ ತಾವು ಕೂಡ ಗುಂಡಿಕ್ಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಏ.24ರಂದು ಈ ಘಟನೆ ನಡೆದಿದ್ದು, ಮೈಸೂರಿನಲ್ಲಿದ್ದ ಹರ್ಷವಧನ್ ತಾಯಿ ಇದೀಗ ಅಮೇರಿಕಕ್ಕೆ ತೆರಳಿದ್ದಾರೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಅಮೇರಿಕದ ಪೊಲೀಸ್ ಇಲಾಖೆ ಶ್ವೇತಾ ಮತ್ತು ಹುಡುಗನ ಸಾವನ್ನು ಕೊಲೆ ಎಂದು ಪರಿಗಣಿಸಿದ್ದು, ಹರ್ಷವರ್ದನ್ ಸಾವನ್ನು ಆತ್ಮಹತ್ಯೆ ಎಂದು ಹೇಳಿದೆ. ಕಾನೂನು ಪ್ರಕ್ರಿಯೆಗಳು ಸಾಗಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.


