ಔಟಿಂಗ್ ಕರೆದೊಯ್ಯದಿರುವುದೇ ಪ್ರಾಣಕ್ಕೆ ಕಂಟಕವಾಯ್ತು: ಪ್ರಿಯಕರನ ಸಹಾಯದಿಂದ ಗಂಡನ ಕೊಲೆ ಮಾಡಿದ ಪತ್ನಿ

Share It


ಲಕ್ನೋ: ಸುತ್ತಾಟಕ್ಕೆ ಕರೆದೊಯ್ಯದ ಗಂಡ ಎಂಬ ಕಾರಣಕ್ಕೆ ಮಡದಿಯೇ ಪ್ರಿಯಕರನ ಜತೆ ಸೇರಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಹರೀಂದರ್ ವರ್ಮಾ ಎಂಬ ವ್ಯಕ್ತಿಯನ್ನು ಆತನ ಪತ್ನಿ ಉಮಾದೇವಿ ಹಾಗೂ ಆಕೆಯ ಪ್ರಿಯಕರ ಜಿತೇಂದ್ರ ವರ್ಮಾ ಸೇರಿ ಕೊಲೆ ಮಾಡಿ ಬಿಸಾಕಿರುವ ಕುರಿತು ಪೊಲೀಸರು ದೃಢಪಡಿಸಿದ್ದಾರೆ. ಹರೀಂದರ್ ವರ್ಮಾ ಕಷ್ಟಪಟ್ಟು ದುಡಿಯುತ್ತಿದ್ದು, ಆತನ ಜತೆಗೆ ಪತ್ನಿ 25 ವರ್ಷದ ಉಮಾದೇವಿ ಅಸಹನೆಯಿಂದಲೇ ಜೀವನ ಮಾಡುತ್ತಿದ್ದಳು. ಮದುವೆಯ ನಂತರವೂ ತನ್ನ ಹಳೆಯ ಸ್ನೇಹಿತನ ಜತೆ ಸಂಬಂಧ ಇಟ್ಟುಕೊಂಡಿದ್ದಳು.

ಹರೀಂದರ್ ಸಿಂಗ್ ತನ್ನ ಮಾವನ ಮನೆಗೆ ಭಾಮೈದನ ಮದುವೆಗೆ ಹೋಗಿದ್ದರು. ಆತನ ಮದುವೆಯ ಕ್ಷಣಗಳಲ್ಲಿ ಆತ ಕೊನೆಯದಾಗಿ ಕಾಣಿಸಿಕೊಂಡಿದ್ದ. ಅದಾದ ನಂತರ ಮರುದಿನ ಆತನ ಶವ ರಕ್ತಸಿಕ್ತವಾಗಿ ಊರಾಚೆಯ ಶಾಲೆಯ ಆವರಣದಲ್ಲಿ ಬಿದ್ದಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರ ವಿಚಾರಣೆಯಲ್ಲಿ ಆತನ ಮಡದಿಯೇ ಪ್ರಿಯಕರನ ಜತೆ ಸೇರಿ ಕೊಲೆ ಮಾಡಿರುವುದು ಬಯಲಾಗಿದೆ. ಪೊಲೀಸರು ಇಬ್ಬರನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ. ಕೊಲೆಗೆ ಸಹಕರಿಸಿದ ಮತ್ತೈದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.


Share It
Previous post

ಸಾರಿಗೆ ಆಶಾಕಿರಣ ಯೋಜನೆಯಡಿ 28,100 BMTC ನೌಕರರ ಕಣ್ಣಿನ ತಪಾಸಣೆ, ಉಚಿತ ಕನ್ನಡಕ ವಿತರಣೆ ಯೋಜನೆಗೆ ಚಾಲನೆ : ಸಚಿವ ರಾಮಲಿಂಗಾ ರೆಡ್ಡಿ ಅವರ ಮತ್ತೊಂದು ಮಹತ್ವಾಂಕ್ಷಿ ಹೆಜ್ಜೆಯ ಸಾಕಾರ

Next post

ಬೆಳ್ಳಂಬೆಳಗ್ಗೆ ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿಯ ಹಿಂದಿನ ಸೀಟ್ ಚೀಲದಲ್ಲಿತ್ತು ಹೆಂಡತಿ ಹೆಣ !

You May Have Missed

You cannot copy content of this page