ಜಗತ್ತಿನ ಎರಡು ಮೂರು ಮಹಾನ್ ನಾಯಕರಿಗೆ ಅಪಮೃತ್ಯುವಿನ ಭೀತಿ: ಕೋಡಿ ಶ್ರೀ ಭವಿಷ್ಯ
ಬಾಗಲಕೋಟೆ: ಜಗತ್ತಿನಲ್ಲಿ ಈ ವರ್ಷ ಅಗ್ನಿ, ವಾಯು, ಜಲ ಮತ್ತು ಭೂಮಿ ಸಂಬಂಧಿತ ಸುನಾಮಿಗಳು ಸಂಭವಿಸಬಹುದು ಎಂದು ಕೋಡಿ ಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಬಾಗಲಕೋಟೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಭವಿಷ್ಯ ಹೇಳಿದ ಕೋಡಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಹೇಳಿದ್ದಿಷ್ಟು:
“ಹಿಮಾಲಯದಿಂದ ಡೆಲ್ಲಿಯವರೆಗೆ ಭೀಕರ ಪರಿಣಾಮ ಉಂಟಾಗಬಹುದು, ಉತ್ತರ ಭಾರತದ ರಾಜ್ಯಗಳಿಗೆ ಅಪಾಯ ಎದುರಾಗಬಹುದು ಹಾಗೂ ಭಾರಿ ಜಲಬಾಧೆ ಸಂಭವಿಸಬಹುದು, ಅದರಲ್ಲಿಯೂ ಜಗತ್ತಿನ ಕೆಲವು ಪ್ರಮುಖ ನಾಯಕರಿಗೆ ಅಪಾಯ ಎದುರಾಗಬಹುದು, ಜೊತೆಗೆ ಜಗತ್ತಿನ ಎರಡು, ಮೂರು ಮಹಾನ್ ನಾಯಕರಿಗೆ ಅಪಮೃತ್ಯುವಿನ ಭೀತಿ ಇದೆ” ಎಂದು ಭವಿಷ್ಯ ಹೇಳಿದ್ದಾರೆ.


