ಬೆಂಗಳೂರು: ಸೇನೆಯ ಬಗ್ಗೆ ಲಘುವಾಗಿ ಮಾತನಾಡಿರುವ ಕೋಲಾರದ ಶಾಸಕ ಕೊತ್ತೂರು ಮಂಜುನಾಥ್ ವಿರುದ್ಧ ಕಿಡಿಕಾರಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು, ಅವರಿಗೆ ನಾಲಗೆ ಮತ್ತು ಮೆದುಳಿನ ಸಂಪರ್ಕ ಕಡಿತವಾಗಿದೆ ಎಂದಿದ್ದಾರೆ.
ಸೈನಿಕರು ಗಡಿಯಲ್ಲಿ ನಮಗಾಗಿ ದುಡಿದು, ಮಡಿಯುತ್ತಾರೆ. ಆದರೆ, ಅವರ ಬಗ್ಗೆ ಲಘುವಾಗಿ ಮಾತನಾಡುವ ಪ್ರಕ್ರಿಯೆಯನ್ನು ಕಾಂಗ್ರೆಸ್ ನಾಯಕರು ಯಾವಾಗಲೂ ಪಾಲನೆ ಮಾಡುತ್ತಾರೆ. ಇದರ ಭಾಗವಾಗಿಯೇ ಪಾಕಿಸ್ತಾನದ ಮೇಲಿನ ನಮ್ಮ ಸೇನೆಯ ದಾಳಿಯ ಕುರಿತು ಲಘುವಾಗಿ ಮಾತನ್ನಾಡುತ್ತಿದ್ದಾರೆ ಎಂದರು.
ಹೆಸರಿಗೆ ದಾಳಿ ನೆಡೆಸಿ, ನಾಲ್ಕೈದು ವಿಮಾನ ಹಾರಿಸಿಬಿಟ್ರೆ ಯುದ್ಧ ಮಾಡಿದಂಗಾಯ್ತದಾ? ಎಂದು ಕೊತ್ತುನೂರು ಮಂಜುನಾಥ್ ಹೇಳಿಕೆ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಸೇನೆಯ ಸಾಮರ್ಥ್ಯವನ್ನು ಪ್ರಶ್ನೆ ಮಾಡಿದ್ದರು. ಇದು ಸಾರ್ವಜನಿಕ ವಲಯದಲ್ಲಿ ಭಾರಿ ಟೀಕೆಗೆ ಕಾರಣವಾಗಿತ್ತು.