ಬೆಂಗಳೂರು: ಮೆಟ್ರೋ ರೈಲಿನಲ್ಲಿ ಹುಡುಗಿಯರ ವಿಡಿಯೋ ಚಿತ್ರೀಕರಣ ಮಾಡಿ Instagram ನಲ್ಲಿ ಹಂಚಿಕೊಳ್ಳುತ್ತಿದ್ದ ಆರೋಪಿಯನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.
ಬAಧಿತ ವ್ಯಕ್ತಿಯನ್ನು ದಿಗಂತ್ ಎಂದು ಹೇಳಲಾಗಿದ್ದು, ಈತ ಹಾಸನ ಮೂಲದ ಹೊಳೇನರಸೀಪುರ ಮೂಲದವನು ಎನ್ನಲಾಗಿದೆ. ಈತ ಮೆಟ್ರೋ ರೈಲಿನಲ್ಲಿ ಯುವತಿಯರು ನಿಂತಿರುವ ವಿವಿಧ ಭಂಗಿಯ ವಿಡಿಯೋಗಳನ್ನು ಸೆರೆಹಿಡಿದು, ಆ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದ ಎನ್ನಲಾಗಿದೆ. ಈಗಾಗಲೇ, ಇಂತಹ 14 ವಿಡಿಯೋಗಳನ್ನು ಆತ ಹಂಚಿಕೊAಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬAಧ ಬನಶಂಕರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯ ಪತ್ತೆಗೆ ಬಲೆ ಬೀಸಿದ್ದರು. ಮೆಟ್ರೋ ನಿಲ್ದಾಣಗಳಲ್ಲಿನ ಸಿಸಿಟಿವಿ ದೃಶ್ಯಾವಳಿಗಳ ಆಧಾರದಲ್ಲಿ ಆತನ ಬಂಧನಕ್ಕೆ ಬಲೆಬೀಸಿದ್ದ ಪೊಲೀಸರಿಗೆ ಇಂದು ದಿಗಂತ್ ಸೆರೆಸಿಕ್ಕಿದ್ದಾನೆ. ಈತ ಹಾಸನದ ಹೊಳೇನರಸೀಪುರದ ಮೂಲದವನು ಎನ್ನಲಾಗಿದೆ.