ಬೆಂಗಳೂರು: TATA IPL ನ ಪ್ಲೇ ಆಪ್ ಹಂತಕ್ಕೆ ಕಾಲಿಡುವ ತಂಡಗಳು ನಿಗದಿಯಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೊರತುಪಡಿಸಿ ದಕ್ಷಿಣ ಭಾರತದ ಯಾವ ತಂಡವೂ ಪ್ರವೇಶ ಪಡೆದಿಲ್ಲ.
ಇದೀಗ ದಕ್ಷಿಣ ಭಾರತದ ಸಂಪೂರ್ಣ ಬೆಂಬಲ RCB ಗೆ ದೊರೆಯಲಿದ್ದು, ಈ ಬೆಂಬಲ ಮತ್ತು ಪ್ರೀತಿ ಗಳಿಸುವ ನಿಟ್ಟಿನಲ್ಲಿ ಈಗಾಗಲೇ ಆರ್ ಸಿ ಬಿ ತಂಡ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಅದರ ಭಾಗವಾಗಿ, ವೇಗಿ ಜೋಸ್ ಹ್ಯಾಸಲ್ವುಡ್ ವಾಪಸ್ಸಾದ ಟ್ವೀಟ್ ನಲ್ಲಿ ದಕ್ಷಿಣ ಭಾರತದ ಎಲ್ಲ ಭಾಷೆಗಳನ್ನು ಬಳಸಿ ಗಮನ ಸೆಳೆದಿದೆ.
ಸಾಮಾನ್ಯವಾಗಿ IPL ಪ್ಲೈ ಆಫ್ ನಲ್ಲಿ ದಕ್ಷಿಣ ಭಾರತದ ಒಂದಕ್ಕಿಂತ ಹೆಚ್ಚು ತಂಡಗಳು ಭಾಗವಹಿಸುತ್ತಿದ್ದವು. ಮೊದಲ ಬಾರಿಗೆ ಆರ್ ಸಿ ಬಿ ಮಾತ್ರವೇ ಕ್ವಾಲಿಫೈ ಆಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಟೂರ್ನಿಯಿಂದ ಹೊರಬಿದ್ದಿವೆ. ಹೀಗಾಗಿ, ಈ ತಂಡಗಳ ಅಭಿಮಾನಿಗಳು ದಕ್ಷಿಣ ಬಾರತದ ಮತ್ತೊಂದು ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೆಂಬಲಕ್ಕೆ ನಿಲ್ಲಲಿದ್ದಾರೆ.
ಈ ಅಂಶ ಗಮನದಲ್ಲಿಟ್ಟುಕೊಂಡು ಆರ್ ಸಿಬಿ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹ್ಯಾಜಲ್ ವುಡ್ ವಾಪಸ್ಸಾದ ವಿಷಯವನ್ನು ಕನ್ನಡ, ತಮಿಳು, ತೆಲುಗು ಮತ್ತು ಮಲೆಯಾಳಂ ಭಾಷೆಯಲ್ಲಿ ಬರೆಯಲಾಗಿದೆ. ಸಹಜವಾಗಿ ಇದು ತಮಿಳುನಾಡಿನ ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳು, ಆಂಧ್ರಪ್ರದೇಶದ ಮತ್ತು ತೆಲಂಗಾಣದ ಸನ್ ರೈಸರ್ಸ್ ಹೈದರಾಬಾದ್ ಅಭಿಮಾನಿಗಳು ಮತ್ತು ಕೇರಳದ ಕ್ರಿಕೆಟ್ ಅಭಿಮಾನಿಗಳ ಮನದಲ್ಲಿ ದಕ್ಷಿಣ ಭಾರತದ ಕಿಚ್ಚು ಹೊತ್ತಿಸುವ ಪ್ರಯತ್ನವಾಗಿದೆ.