ಬೀದರ್:ತಿರಂಗ ಯಾತ್ರೆ ವೇಳೆ​ ಶಾಸಕ ಪ್ರಭು ಚೌಹಾಣ್​ ತೀವ್ರ ಅಸ್ವಸ್ಥ: ಆಸ್ಪತ್ರೆಗೆ ದಾಖಲು

Share It

ಬೀದರ್:ಅಪರೇಷನ್ ಸಿಂಧೂರ ಯಶಸ್ವಿ ಹಿನ್ನೆಲೆ ಔರಾದ್‌ನಲ್ಲಿ ತಿರಂಗಾ ಯಾತ್ರೆ ನಡೆಯುತ್ತಿದ್ದು. ಈ ತಿರಂಗ ಯಾತ್ರೆಯಲ್ಲಿ ಶಾಸಕ ಪ್ರಭು ಚೌಹಾಣ್​ ತೀವ್ರ ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಆಪರೇಷನ್​ ಸಿಂಧೂರ್​ ಯಶಸ್ವಿ ಬೆನ್ನಲ್ಲೇ ರಾಷ್ಟ್ರದಲ್ಲಿ ತಿರಂಗ ಯಾತ್ರೆ ನಡೆಯುತ್ತಿದೆ.

ಇದರ ಭಾಗವಾಗಿ ಬೀದರ್​ನಲ್ಲಿ ನಡೆದ ತಿರಂಗ ಯಾತ್ರೆಯಲ್ಲಿ ಔರಾದ್​ ಶಾಸಕ ಪ್ರಭು ಚೌಹಾಣ್ ಅಸ್ವಸ್ಥರಾಗಿದ್ದಾರೆ. ಬೀದರ್​ ನಗರದ ಐಬಿಯಿಂದ ಎಪಿಎಮ್‌ಸಿ ವೃತ್ತದವರೆಗೆ ನಡೆದ ತಿರಂಗಾ ಯಾತ್ರೆಯಲ್ಲಿ ತಿರಂಗ ಧ್ವಜ ಹಿಡಿದು ಹೆಜ್ಜೆ ಹಾಕಿದ ಪ್ರಭು ಚೌಹಾಣ್​ ಕುಳಿತಲ್ಲಿಯೇ ತೀವ್ರ ಅಸ್ವಸ್ಥರಾಗಿದ್ದಾರೆ.

ಪ್ರಭು ಚೌಹಾಣ್​ ಅಸ್ವಸ್ಥರಾಗಿದ್ದನು ಗಮನಿಸಿದ ಬಿಜೆಪಿ ಕಾರ್ಯಕರ್ತರು ಅವರನ್ನು ಕೂಡಲೇ ಔರಾದ್​ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನೂ ಈ ತಿರಂಗ ಯಾತ್ರೆಯಲ್ಲಿ ಬೀದರ್​ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾತ್ ಪಾಟೀಲ್, ಬಿಜೆಪಿ ಮುಖಂಡರು ಹಾಗೂ ಸ್ವಾಮೀಜಿಗಳು ವಿದ್ಯಾರ್ಥಿಗಳು ಭಾಗಿಯಾಗಿದ್ದರು.


Share It

You May Have Missed

You cannot copy content of this page