ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಸೂಪರ್ ಕಿಂಗ್ಸ್ ನಡುವೆ ಇಂದು ರಾತ್ರಿ ಚಂಡೀಗಢದ ಮಲ್ಲನ್ ಪುರ ಮೈದಾನದಲ್ಲಿ ಐಪಿಎಲ್-2025 ಕ್ವಾಲಿಫೈಯರ್-1 ಪಂದ್ಯ ನಡೆಯಲಿದೆ.
ಕ್ವಾಲಿಫೈಯರ್-1 ಪಂದ್ಯಕ್ಕೆ ಮಳೆಯ ಭೀತಿ ಆವರಿಸಿತ್ತು. ಆದರೆ ಮಲ್ಲನ್ಪುರ ಮೈದಾನದ ಸುತ್ತಮುತ್ತ ಮಳೆ ಬೀಳುವ ಸಾಧ್ಯತೆ ಇಲ್ಲ. ಅಲ್ಲಿನ ವಾತಾವರಣ 23 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಗಾಳಿಯ ವೇಗದ ಪ್ರಮಾಣ ಗಂಟೆಗೆ 20 ಕಿಲೋ ಮೀಟರ್ ಇರಲಿದೆ. ಪಂದ್ಯ ನಡೆಸಲು ಸೂಕ್ತ ವಾತಾವರಣ ಇರಲಿದೆ ಅಂತ ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಈಗಾಗಲೇ ಐಪಿಎಲ್-25 ರಲ್ಲಿ
ಪಂಜಾಬ್ ಕಿಂಗ್ಸ್, ಆರ್ಸಿಬಿ, ಗುಜರಾತ್ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್ ಪ್ಲೇ-ಆಫ್ಗೆ ಎಂಟ್ರಿ ನೀಡಿವೆ. ಇಂದು ಕ್ವಾಲಿಫೈಯರ್-1 ಪಂದ್ಯ ನಡೆಯಲಿದೆ.
ಮೊದಲ ಕ್ವಾಲಿಫೈಯರ್-1 ಪಂದ್ಯದಲ್ಲಿ ಮೊದಲ ಎರಡು ಸ್ಥಾನದಲ್ಲಿರುವ ಆರ್ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಸೆಣಸಾಟ ನಡೆಸಲಿವೆ. ಇಂದು ಗೆದ್ದ ತಂಡ ಫೈನಲ್ಗೆ ಎಂಟ್ರಿ ಕೊಡಲಿದೆ. ನಾಳೆ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟನ್ಸ್ ಮಧ್ಯೆ ಎಲಿಮಿನೇಟರ್ ಪಂದ್ಯ ನಡೆಯಲಿದೆ.
ಎಲಿಮಿನೇಟರ್ ಪಂದ್ಯದಲ್ಲಿ ಗೆದ್ದ ತಂಡವು ಕ್ವಾಲಿಫೈಯರ್-1 ರಲ್ಲಿ ಸೋತ ತಂಡವನ್ನು ಕ್ವಾಲಿಫೈಯರ್-2 ಪಂದ್ಯದಲ್ಲಿ ಎದುರಿಸಲಿದೆ. ಕ್ವಾಲಿಫೈಯರ್-2 ರಲ್ಲಿ ಗೆದ್ದ ತಂಡವು ಫೈನಲ್ ನಲ್ಲಿ ಆಡಲಿದೆ.