ಅಪರಾಧ ಸುದ್ದಿ

ಬೀದರ್ | ಹಾಡಹಗಲೇ ಕಾರಿನಲ್ಲಿದ್ದ ₹ 2 ಲಕ್ಷ ಹಣ ಎಗರಿಸಿದ ಖತರ್ನಾಕ್ ಖದೀಮರು

Share It

ಬೀದರ್: ಜಿಲ್ಲೆಯ ಭಾಲ್ಕಿ ಪಟ್ಟಣದ ಮಹಾತ್ಮಾ ಗಾಂಧಿ ಸರ್ಕಲ್ ಬಳಿ ಹಾಡಹಗಲೇ ಕಳತನ ನಡೆದಿದೆ. ಕಾರಿನ ಗಾಜನ್ನು ಒಡೆದು ಕ್ಷಣಾರ್ಧದಲ್ಲಿ 2 ಲಕ್ಷ ರೂಪಾಯಿಗಳನ್ನು ಕದ್ದೊಯ್ದ ಖದೀಮರು ಪರಾರಿಯಾಗಿದ್ದಾರೆ. ಭಾಲ್ಕಿ ನಿವಾಸಿ ಶಿವಕುಮಾರ್ ಲೋಕಂಡೆ ತಮ್ಮ ಮನೆಯ ಕೆಲಸಗಾರರ ಪಾವತಿಗಾಗಿ ತಂದಿದ್ದ ಹಣವನ್ನು ಕದಿಯಲಾಗಿದೆ.

ಶಿವಕುಮಾರ್ ಅವರ ಚಾಲಕ ಶ್ರೀಕಾಂತ್ ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ 2 ಲಕ್ಷ ರೂಪಾಯಿಗಳನ್ನು ಡ್ರಾ ಮಾಡಿಕೊಂಡು ಶಿವಕುಮಾರ್ ಅವರನ್ನು ಭೇಟಿಯಾಗಲು ಕಾರಿನಲ್ಲಿ ಬಂದಿದ್ದರು. ಈ ವೇಳೆ, ಹಣವನ್ನು ಕಾರಿನಲ್ಲಿ ಇಟ್ಟು ಶಿವಕುಮಾರ್‌ರನ್ನು ಭೇಟಿಯಾಗಲು ತೆರಳಿದ ಕೆಲವೇ ಕ್ಷಣಗಳಲ್ಲಿ ಖದೀಮರು ಕಾರಿನ ಗಾಜನ್ನು ಒಡೆದು ಹಣವನ್ನು ಕದ್ದೊಯ್ದಿದ್ದಾರೆ. ಈ ಕೃತ್ಯದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಪ್ರಕರಣವು ಭಾಲ್ಕಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ಚುರುಕುಗೊಂಡಿದೆ.


Share It

You cannot copy content of this page