ಅಮೆರಿಕದಲ್ಲಿ ಲಾರೀ ಪಲ್ಟಿಯಾಗಿ 250 ಮಿಲಿಯನ್ ಜೇನುನೊಣಗಳು ತಪ್ಪಿಸ್ಕೊಂಡವು.
ಅಂದಾಜು 70,000 ಪೌಂಡ್ (31,751 ಕಿಲೋಗ್ರಾಂ) ಜೇನುನೊಣ ಗೂಡುಗಳನ್ನು ಸಾಗಿಸುತ್ತಿದ್ದ ವ್ಯಾಪಾರ ಲಾರಿಯೊಂದು ಅಮೆರಿಕದ ಪಶ್ಚಿಮ ಭಾಗದಲ್ಲಿ ಪಲ್ಟಿಯಾಗಿ, ಲಕ್ಷಾಂತರ ಜೇನುನೊಣಗಳು ಹೊರಬಿದ್ದಿವೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.
ಈ ಅಪಘಾತವು ವಾಷಿಂಗ್ಟನ್ ರಾಜ್ಯದ ಉತ್ತರಪಶ್ಚಿಮ ಭಾಗದಲ್ಲಿ, ಕೆನಡಾ ಗಡಿಗೆ ಸಮೀಪವಿರುವ ಲಿಂಡನ್ ಎಂಬ ಊರಿನಲ್ಲಿ ಸಂಭವಿಸಿದೆ ಎಂದು ವಾಟ್ಕಮ್ ಕೌಂಟಿ ಶೆರಿಫ್ ಕಚೇರಿ ತನ್ನ ಸಾಮಾಜಿಕ ಜಾಲತಾಣದ ಪೋಸ್ಟ್ಗಳಲ್ಲಿ ತಿಳಿಸಿದೆ. ಸುಮಾರು 250 ಮಿಲಿಯನ್ ಜೇನುನೊಣಗಳು ಲಾರಿಯಿಂದ ತಪ್ಪಿಸ್ಕೊಂಡಿರುವ ಸಾಧ್ಯತೆ ಇದೆ.
“250 ಮಿಲಿಯನ್ ಜೇನುನೊಣಗಳು ಈಗ ಮುಕ್ತವಾಗಿ ಹರಡಿವೆ,” ಎಂದು ವಾಟ್ಕಮ್ ಕೌಂಟಿ ಶೆರಿಫ್ ಕಚೇರಿ ತನ್ನ ಸಾಮಾಜಿಕ ಜಾಲತಾಣ ಪುಟದಲ್ಲಿ ಬರೆದುಕೊಂಡಿದೆ. “ಜೇನುನೊಣಗಳು ಹಾರಿ ಹರಡುವ ಮತ್ತು ದಾಳಿ ಮಾಡುವ ಸಾಧ್ಯತೆ ಇರುವುದರಿಂದ ಈ ಪ್ರದೇಶದಲ್ಲಿ ಬರದಂತೆ ವಾಹನ ಸವಾರರಿಗೆ ತಿಳಿಸಲಾಗಿದೆ.
ಸಾರ್ವಜನಿಕರಿಗೆ ಎಚ್ಚರಿಕೆಯಿಂದ ಇರುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.