ಸುದ್ದಿ

ಇರಾನ್ ಮೇಲೆ ಅಮೇರಿಕ ಕ್ಷೀಪಣಿ ಸುರಿಮಳೆ : 3ನೇ ಮಹಾಯುದ್ಧ ಫಿಕ್ಸ್

Share It


ನವದೆಹಲಿ: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧಕ್ಕೆ ಇದೀಗ ಅಮೆರಿಕ ಎಂಟ್ರಿಯಾಗಿದ್ದು, ಮೂರನೇ ಮಹಾಯುದ್ದದ ಕಡೆಗೆ ಜಗತ್ತು ಮುಖ ಮಾಡುತ್ತಿದೆ.

ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸುತ್ತಿದ್ದಂತೆ, ಇರಾನ್ ಇಸ್ರೇಲ್ ವಿರುದ್ಧ ಪ್ರತಿದಾಳಿ ನಡೆಸಿತ್ತು. ಈ ದಾಳಿಯ ಭಾಗವಾಗಿ ನಡೆಯುತ್ತಿದ್ದ ಬೆಳವಣಿಗೆಗಳನ್ನು ಗಮನಿಸುತ್ತಿದ್ದ ಅಮೇರಿಕ ಕದನ ವಿರಾಮ ಘೋಷಣೆಗೆ ಸೂಚನೆ ನೀಡಿತ್ತು. ಉಭಯ ದೇಶಗಳು ಇದಕ್ಕೆ ಮಣೆ ಹಾಕದೆ ಇದ್ದಾಗ ಇದೀಗ ಇರಾನ್ ಮೇಲೆ ಅಮೇರಿಕ ಕ್ಷೀಪಣಿಗಳ ಸುರಿಮಳೆಗರೆದಿದೆ.

ಇರಾನ್ ಅಣು ಸ್ಥಾವರಗಳು ಮತ್ತು ಅಣು ಬಾಂಬ್ ತಯಾರಿಕಾ ಘಟಕಗಳ ಮೇಲೆ ಹೆಚ್ಚಾಗಿ ದಾಳಿ ನಡೆದಿದ್ದು, ದಾಳಿ ಕುರಿತು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಟ್ವೀಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇಸ್ರೇಲ್ ವಾಯುಸೇನೆಯೂ ಕೂಡ ಅಧಿಕೃತ ಖಾತೆಯಲ್ಲಿ ದಾಳಿಯ ಬಗೆಗಿನ ಮಾಹಿತಿ ಹಂಚಿಕೊಳ್ಳಲಾಗಿದೆ.

ಅಮೇರಿಕಾದ ಈ ಎಂಟ್ರಿ ಇದೀಗ ಜಗತ್ತಿನಲ್ಲಿ ಕೋಲಾಹಲ ಎಬ್ಬಿಸಿದ್ದು, ಮುಂದಿನ ಮಹಾಯುದ್ಧಕ್ಕೆ ನಾಂದಿಯಾಗಲಿದೆ ಎಂಬ ಆತಂಕ ಶುರುವಾಗಿದೆ. ಇದೀಗ ಇರಾನ್ ಪರವಾಗಿ ನಿಲ್ಲಲು, ಚೀನಾ ಮತ್ತು ರಷ್ಯಾ ಮುಂದಾಗುವ ಸಾಧ್ಯತೆಯಿದ್ದು, ಇದು ಮುಂದಿನ ಮಹಾಯುದ್ದಕ್ಕೆ ಮುನ್ನುಡಿ ಬರೆಯಲಿದೆ.


Share It

You cannot copy content of this page