ಇ-ಕಾಮರ್ಸ್, ಬೈಕ್ ಟ್ಯಾಕ್ಸಿ ಮೇಲೆ ಕಠಿಣ ನಿಯಂತ್ರಣ: ಸಾರಿಗೆ ಆಯುಕ್ತರುಗಳಿಗೆ ಕೇಂದ್ರದಿಂದ ಸುತ್ತೋಲೆ
ಬೆಂಗಳೂರು: ಭಾರತ ಸರ್ಕಾರದ ರಸ್ತೆ ಮತ್ತು ಹೆದ್ದಾರಿಗಳ ಸಚಿವಾಲಯ ಇ-ಕಾಮರ್ಸ್ ಮತ್ತು ಕ್ವಿಕ್ ಕಾಮರ್ಸ್ ಕಂಪನಿಗಳ ಡೆಲಿವರಿ ಸಿಬ್ಬಂದಿಯಿಂದ ನಡೆಯುತ್ತಿರುವ ನಿಯಮ ಉಲ್ಲಂಘನೆಗಳ ವಿರುದ್ಧವ ನಿಖರವಾದ ಕಾನೂನು ಪ್ರಕ್ರಿಯೆ ಮತ್ತು ನಿಯಮಗಳ ಕಟ್ಟುನಿಟ್ಟಾದ ಜಾರಿಗೆ ಕ್ರಮ ಕೈಗೊಳ್ಳಲು ಸೂಚಿಸಿದೆ.
ಸಾರ್ವಜನಿಕ ಸುರಕ್ಷತೆ ಮತ್ತು ನಿಯಮಪಾಲನೆ ಖಚಿತಪಡಿಸಲು ಇದು ಅತ್ಯಂತ ಅಗತ್ಯವಾಗಿದೆ ಎಂದು ಸಹ ತಿಳಿಸಿದೆ. ಎಲ್ಲ ರಾಜ್ಯಗಳ ಸಾರಿಗೆ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿರುವ ಅಂಶಗಳು ಈ ಕೆಳಗಿನಂತಿವೆ:
1) ನಿಯಮಾತ್ಮಕ ಉಲ್ಲಂಘನೆ –ವಾಣಿಜ್ಯ ವಿತರಣೆಗೆ ಖಾಸಗಿ ವಾಹನಗಳ ಬಳಕೆಯಾಗುತ್ತಿರುವುದು ವರದಿಯಾಗಿದ್ದು, ಇದು ವಿಮೆ, ತೆರಿಗೆ ಹಾಗೂ ನೋಂದಣಿ ಸಂಬಂಧಿತ ಅಸ್ತಿತ್ವದಲ್ಲಿರುವ ಸಾರಿಗೆ ನಿಯಮಗಳನ್ನು ದೂರಿಸಲು ಕಾರಣವಾಗುತ್ತಿದೆ.
2) ಸಾರ್ವಜನಿಕ ಸುರಕ್ಷತಾ ಅಪಾಯಗಳು – ನಿರಂತರವಾಗಿ ಸಿಗ್ನಲ್ ಉಲ್ಲಂಘನೆ, ಅತಿವೇಗ, ಟ್ರಾಫಿಕ್ ವಿರುದ್ಧವಾಗಿ ಚಾಲನೆ, ಪಾದಚಾರಿ ಮಾರ್ಗಗಳ ಬಳಕೆ ಇತ್ಯಾದಿ ಪ್ರಕರಣಗಳು ಹೆಚ್ಚುತ್ತಿದ್ದು, ಈ ಎಲ್ಲಾ ಹಂಗಾಮಿಗಳು ಸಾರ್ವಜನಿಕರ ಸುರಕ್ಷತೆಗೆ ಗಂಭೀರ ಅಪಾಯವನ್ನುಂಟುಮಾಡುತ್ತಿದೆ.
3) ನಗರ ಟ್ರಾಫಿಕ್ ಗೊಂದಲ – ತ್ವರಿತ ವಿತರಣಾ ಸಮಯಮಿತಿಯುಳ್ಳ ಟ್ರಾಫಿಕ್ ಏರಿಕೆಯಿಂದ ನಗರ ಪ್ರದೇಶಗಳಲ್ಲಿ ಉಂಟಾಗುವ ಸಂಚಾರ ಗೊಂದಲವು ಹೆಚ್ಚುತ್ತಿದೆ.
4) ಈ ಉಲ್ಲಂಘನೆಗಳ ಜವಾಬ್ದಾರಿ ಪ್ರತ್ಯೇಕ ರಾಜ್ಯ/ಕೇಂದ್ರಾಡಳಿತ ಪ್ರದೇಶಗಳ ಸಾರಿಗೆ ಮತ್ತು ಸಂಚಾರ ಇಲಾಖೆಗಳ ವ್ಯಾಪ್ತಿಗೆ ಒಳಪಡುವುದರಿಂದ, ಈ ಸಂಬಂಧ ಸೂಕ್ತ ಮತ್ತು ತಕ್ಷಣದ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ.


