ಉಪಯುಕ್ತ ಸುದ್ದಿ

KSRTC ಯಿಂದ ಚಿಕ್ಕತಿರುಪತಿ-ಕೋಟಿ ಲಿಂಗೇಶ್ವರ ದರ್ಶನದ ಟೂರ್ ಪ್ಯಾಕೇಜ್

Share It

ಬೆಂಗಳೂರು: ಬೆಂಗಳೂರು ಸುತ್ತಲಿನ ಪ್ರಸಿದ್ಧ ಐತಿಹಾಸಿಕ ಸ್ಥಳಗಳ ದರ್ಶನ ಮಾಡಿಸುವ ಟೂರ್ ಪ್ಯಾಕೇಜ್ ಅನ್ನು KSRTC ಆರಂಭಿಸಿದೆ.

ಬೆಂಗಳೂರಿನಿಂದ ಹೊರಟು, ಚಿಕ್ಕತಿರುಪತಿ, ಬಂಗಾರಪೇಟೆ, ಕೋಟಿಲಿಂಗೇಶ್ವರ, ಬಂಗಾರು ತಿರುಪತಿ, ಆವಣಿ, ಮುಳುಬಾಗಿಲು, ಕುರುಡುಮಲೆ, ಕೋಲಾರದ ಮೂಲಕ ಬೆಂಗಳೂರು ತಲುಪಲಿದೆ. ಈ ವೇಳೆ ಚಿಕ್ಕತಿರುಪತಿ ವೆಂಕಟೇಶ್ವರ ದೇವಸ್ಥಾನ, ಕೋಟಿ ಲಿಂಗೇಶ್ವರ ದೇವಸ್ಥಾನ, ಬಂಗಾರು ತಿರುಪತಿ, ರಾಮಲಿಂಗೇಶ್ವರ ದೇವಸ್ಥಾನ, ಮುಳುಬಾಗಿಲು ಆಂಜನೇಯ ದೇವಸ್ಥಾನ, ಕುರುಡುಮಲೆ ಗಣೇಶ ದೇವಸ್ಥಾನ, ಕೋಲಾರಮ್ಮ, ಸೋಮೇಶ್ವರ ದೇವಸ್ಥಾನಗಳ ವೀಕ್ಷಣೆ ಮಾಡಿಸಲಾಗುತ್ತದೆ.

ಜೂ.28 ರಿಂದ ಆರಂಭವಾಗಲಿರುವ ಈ ಟೂರ್ ಪ್ಯಾಕೇಜ್ ವಾರಾಂತ್ಯದ ಶನಿವಾರ ಮತ್ತು ಭಾನುವಾರ ಇರಲಿದೆ. ಬುಕ್ಕಿಂಗ್ ಶುಲ್ಕ ಸೇರಿ ವಯಸ್ಕರಿಗೆ 600 ರು. ಹಾಗು ಮಕ್ಕಳಿಗೆ 450 ರುಪಾಯಿ ಶುಲ್ಕ ನಿಗದಿ ಮಾಡಲಾಗಿದೆ. ಪ್ರವೇಶ ಶುಲ್ಕ, ಉಪಹಾರ ಮತ್ತು ಊಟದ ಖರ್ಚು ಪ್ರಯಾಣಿಕರದ್ದೇ ಆಗಿರುತ್ತದೆ. ಬೆಳಗ್ಗೆ 6-30 ಕ್ಕೆ ಬಸ್ ಬೆಂಗಳೂರಿನಿಂದ ಹೊರಡಲಿದ್ದು, ರಾತ್ರಿ 8.30 ಕ್ಕೆ ಬೆಂಗಳೂರಿಗೆ ವಾಪಸ್ಸಾಗಲಿದೆ.


Share It

You cannot copy content of this page