ರಾಜಕೀಯ ಸುದ್ದಿ

ಆ ಸಿದ್ರಾಮಯ್ಯ ಲಕ್ಕಿ ಲಾಟರಿ ಸಿಎಂ: ಶಾಸಕ ಬಿ.ಆರ್ ಪಾಟೀಲ್ ಸ್ಫೋಟಕ ವಿಡಿಯೋ ವೈರಲ್!

Share It

ಬೆಂಗಳೂರು:ನಾನು ಬಾಯಿಬಿಟ್ಟರೆ ಸರ್ಕಾರವೇ ಅಲುಗಾಡುತ್ತೆ. ಅಳಂದ ಶಾಸಕ ಬಿ.ಆರ್ ಪಾಟೀಲ್ ಆಡಿದ ಈ ಅಬ್ಬರದ ಮಾತು ಕಾಂಗ್ರೆಸ್ ಮನೆಯನ್ನ ನಡುಗಿಸಿತ್ತು. ಸರ್ಕಾರವನ್ನ ಅಲುಗಾಡಿಸಿತ್ತು. ವಸತಿ ಯೋಜನೆಯಲ್ಲಿ ಮನೆ ನೀಡಲು ಲಂಚ ಪಡೆಯಲಾಗ್ತಿದೆ ಎಂಬ ಬಿ.ಆರ್ ಪಾಟೀಲ್ ಆರೋಪದಿಂದ ಶುರುವಾದ ಅಸಮಾಧಾನದ ಜ್ವಾಲೆ ಕೈಪಡೆಯನ್ನ ಬಡೆದೆಬ್ಬಿಸಿತ್ತು. ಇದರ ಬೆನ್ನಲ್ಲೇ ಶಾಸಕ ಬಿ.ಆರ್​.ಪಾಟೀಲ್ ಮಾತಾನಾಡಿರುವ ವಿಡಿಯೋ ವೈರಲ್ ಆಗಿದೆ.

ಯಾರದ್ದೋ ಜೊತೆ ಫೋನ್​​ ನಲ್ಲಿ ಮಾತಾಡುವಾಗ ಮೊಬೈಲ್​ ನಲ್ಲಿ ಸೆರೆಯಾಗಿದೆ. ಮಂಡ್ಯ ಜಿಲ್ಲೆ K.R.ಪೇಟೆಗೆ ಬಂದಿದ್ದಾಗ ಮಾತಾಡಿದ್ದಾರೆ ಎನ್ನಲಾದ ವಿಡಿಯೋ ಇದಾಗಿದ್ದು, ಸಿದ್ದರಾಮಯ್ಯ ಲಕ್ಕಿ ಲಾಟರಿ ಹೊಡೆದುಬಿಟ್ಟ. ಸಿದ್ದರಾಮಯ್ಯಗೆ ಸೋನಿಯಾ ಗಾಂಧಿ ಜೊತೆ ಭೇಟಿ ಮಾಡಿಸಿದ್ದೇ ನಾನು. ಸಿದ್ದರಾಮಯ್ಯ ಗ್ರಹಚಾರ ಚೆನ್ನಾಗಿತ್ತು ಆತ ಮುಖ್ಯಮಂತ್ರಿ ಆದ. ನನ್ನ ಗ್ರಹಚಾರ ಚೆನ್ನಾಗಿಲ್ಲ ಎಂದು ಬಿ.ಆರ್​.ಪಾಟೀಲ್ ಬೇಸರ ಹೊರಹಾಕಿರುವುದು ಆಡಿಯೋದನಲ್ಲಿದೆ.

ಸುರ್ಜೆವಾಲ ಭೇಟಿ ಮಾಡಿ ಎಲ್ಲಾ ವಿಚಾರಗಳನ್ನು ಹೇಳಿದ್ದೇನೆ. ನನ್ನ ಮಾತನ್ನು ಸುರ್ಜೇವಾಲ ಗಂಭೀರವಾಗಿ ಆಲಿಸಿದ್ದಾರೆ. ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುತ್ತೋ ನೋಡೋಣ ಎಂದು ಆಪ್ತರೊಬ್ಬರ ಜೊತೆ ಫೋನ್​ನಲ್ಲಿ ಬಿಆರ್ ಪಾಟೀಲ್ ಮಾತನಾಡಿರುವುದು ವೈರಲ್ ಆಗಿದ್ದು, ಈ ಮೂಲಕ ಬಿಆರ್ ಪಾಟೀಲ್, ಸಿದ್ದರಾಮಯ್ಯ ವಿರುದ್ಧ ಸುರ್ಜೆವಾಲ ಅವರಿಗೆ ದೂರು ನೀಡಿದ್ರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

B.R​​.ಪಾಟೀಲ್ ಹೇಳಿಕೆಗೆ CM ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು, ಹೌದು ರಾಜ್ಯದ ಮುಖ್ಯಮಂತ್ರಿ ಆಗಿದ್ದೇನೆ, ನಾನು ಅದೃಷ್ಟವಂತ. ನಾನು ಅವರು ಒಟ್ಟಿಗೆ ಶಾಸಕರಾಗಿದ್ದು ಅದಕ್ಕೆ ಹೇಳಿರಬಹುದು ಗೊತ್ತಿಲ್ಲ. ಬಿ.ಆರ್​.ಪಾಟೀಲ್ ಹೇಳಿದ್ದಾನೆ. ಅದಕ್ಕೆ ನಾನು ಏನು ಮಾಡಲಿ . ಬಿ.ಆರ್​.ಪಾಟೀಲ್ ಕರೆಸಿ ಮಾತಾಡುತ್ತೇನೆ ಎಂದರು.


Share It

You cannot copy content of this page