ಉಪಯುಕ್ತ ಸುದ್ದಿ

ಬಾಗೇಪಲ್ಲಿ ಇನ್ಮುಂದೆ ಭಾಗ್ಯನಗರ : ಸರಕಾರದ ಮಹತ್ವದ ತೀರ್ಮಾನ

Share It

ಚಿಕ್ಕಬಳ್ಳಾಪುರ: ನಂದಿ ಗಿರಿಧಾಮದಲ್ಲಿ ಇಂದು ಬುಧವಾರ ರಾಜ್ಯಸರ್ಕಾರದ ಸಚಿವ ಸಂಪುಟ ಸಭೆ ನಡೆಯಿತು.

ಈ ಸಂಪುಟ ಸಭೆ ಬಳಿಕ ಕಾನೂನು ಸಚಿವ ಹೆಚ್.ಕೆ ಪಾಟೀಲರ ಬದಲು ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಸುದ್ದಿಗೋಷ್ಠಿ ನಡೆಸಿ ಸಭೆಯಲ್ಲಿ ತೆಗೆದುಕೊಂಡ ಕೆಲ ನಿರ್ಣಯಗಳನ್ನು ಮಾಧ್ಯಮದವರಿಗೆ ತಿಳಿಸಿದರು.

ಈಗಾಗಲೇ ವರದಿ ಮಾಡಿರುವಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಜಿಲ್ಲೆ ಅಂತ ಪುನರ್ ನಾಮಕರಣ ಮಾಡಲು ಸರ್ಕಾರ ನಿರ್ಧರಿಸಿದೆ. ಹಾಗೆಯೇ, ಕೋಲಾರ ಜಿಲ್ಲೆಯಲ್ಲಿರುವ ಬಾಗೇಪಲ್ಲಿಯ ಹೆಸರನ್ನು ಭಾಗ್ಯನಗರ ಎಂದ ಬದಲಾಯಿಸಲು ತೀರ್ಮಾನಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬಾಗೇಪಲ್ಲಿ ತಾಲೂಕಿನಲ್ಲಿ ಪಲ್ಲಿಯಿಂದ ಕೊನೆಗೊಳ್ಳುವ ಎಲ್ಲ ಊರುಗಳ ಹೆಸರುಗಳನ್ನು ಬದಲಾಯಿಸುತ್ತೀರಾ? ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಸಿಎಂ ಹೀಗೆಂದರು: “ಗೊತ್ತಿಲ್ಲ ಕಣಯ್ಯ, ನಮ್ಮ ಶಾಸಕರು ಹೇಳಿದಂತೆ ಮಾಡಿದ್ದೇವೆ ಎಂದು ನಗುತ್ತಾ ಉತ್ತರಿಸಿದರು.


Share It

You cannot copy content of this page