ಬೆಂಗಳೂರು : ಕೇರಳದಲ್ಲಿ ನಡೆದ ಆಲ್ ಇಂಡಿಯಾ ನ್ಯಾಷನಲ್ ಮಾರ್ಷಲ್ ಆರ್ಟ್ಸ್ ಪೂರ್ಣ ಸಂಪರ್ಕ ನಾಕ್‌ಡೌನ್ ಓಪನ್ ಟೂರ್ನಮೆಂಟ್ ನಲ್ಲಿ ಲೈಫ್ ಫಿಟ್ನೆಸ್ ಕ್ರಾಸ್ ಫಿಟ್ ಕಂಬೌಟ್ ಸ್ಪೋರ್ಟ್ಸ್ ನ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡಿ ಸಾಧನೆಗೈದಿದ್ದಾರೆಂದು ಕರಾಟೆ ಮಾಸ್ಟರ್ ಸನ್ ಸೈ ಬಾಬು ತಿಳಿಸಿದರು.
ಕೆಆರ್ ಪುರದ ನಾರಾಯಣಪುರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಈಗಿನ ಯುವಕರಲ್ಲಿ ಕರಾಟೆ ಕಲಿಯುವ ಆಸಕ್ತಿ ಅತಿ ಕಡಿಮೆ, ದೈಹಿಕ ಶಿಸ್ತು ಏಕಾಗ್ರತೆ ಹಾಗೂ ಆತ್ಮಸ್ಥೈರ್ಯ ಹೆಚ್ಚಿಸಲು ಸಹಕಾರಿ ಆಗುವ ಕರಾಟೆ ಲಿಂಗ ಭೇದವಿಲ್ಲದೆ ಕಲಿಯುವ ಅವಕಾಶವಿದೆ ಕಲಿತು ಸಾಧನೆಗೈಯುವ ಚತುರತೆ ಇರುತ್ತೆ ಎಂದರು .
ಇನ್ನೂ ಕಳೆದ ಮೇ 9 ಮತ್ತು 10 ರಂದು ನಡೆದ ಆಲ್ ಇಂಡಿಯಾ ನ್ಯಾಷನಲ್ ಮಾರ್ಷಲ್ ಆರ್ಟ್ಸ್ ಪೂರ್ಣ ಸಂಪರ್ಕ ನಾಕ್‌ಡೌನ್ ಓಪನ್ ಟೂರ್ನಮೆಂಟ್ ನಲ್ಲಿ ಭಾಗವಹಿಸಿದ ಪದ್ಮಾ ಪ್ರಿಯಾ ಬಾಬು , ಸಾಮ್ರುಧ್ ಅವರು ಚಾಂಪಿಯನ್‌ಶಿಪ್ ಗೆದ್ದಿದ್ದು , ಮೇ 25 ರಂದು ಕೇರಳದಲ್ಲಿ ನಡೆದ ಐಕೆಒ ಮಾಟ್ಸುಶಿಮಾ ಅಖಿಲ ಭಾರತ ರಾಷ್ಟ್ರೀಯ ಪೂರ್ಣ ಸಂಪರ್ಕ ನಾಕ್‌ಡೌನ್ ಓಪನ್ ಟೂರ್ನಮೆಂಟ್ ನಲ್ಲಿ ಕರುಣಾ ಮೂರ್ತಿ ,ಕೃಷ್ಣ ಚೈತನ್ಯ , ಲಕ್ಷ್ಯಕುಮಾರ್ ಚಾಂಪಿಯನ್ ಶಿಪ್ ಗೆದ್ದಿದ್ದು , ಉಲ್ಲಾಸ್ ಎರಡನೇ ಸ್ಥಾನವನ್ನು ಗೆದ್ದಿದ್ದಾರೆ .ಮತ್ತು ಸೆನ್ಸೈ ಲಕ್ಷಿತಾ ಬಾಬು ಅವರು ಜಪಾನ್ ನಿಂದ ಅಂತರರಾಷ್ಟ್ರೀಯ ಸ್ಯಾಂಡನ್ 3 ನೇ ಡಾನ್ ಬ್ಲ್ಯಾಕ್ ಬೆಲ್ಟ್ ಅನ್ನು ಉತ್ತೇಜಿಸಿದ್ದಾರೆ ಎಂದು ವಿವಸಿದ್ದಾರೆ .
ಇದೆ ವೇಳೆ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಕೆಆರ್ ಪುರ ಕ್ಷೇತ್ರದ ಅಧ್ಯಕ್ಷ ಕೃಷ್ಣಮೂರ್ತಿ ಹಾಗೂ ಸಂಗಡಿಗರು ಕರಾಟೆ ಮಾಸ್ಟರ್ ಸನ್ ಸೈ ಬಾಬು ಸನ್ಮಾನಿಸಿದರು .