ಉಪಯುಕ್ತ ಸುದ್ದಿ

ಭಾರತಕ್ಕಿಂತ 16 ಮಿಲಿಯನ್ ಪಟ್ಟು ವೇಗವಾಗಿ ವರ್ಕ್ ಆಗುತ್ತೆ ಜಪಾನ್ ಇಂಟರ್ನೆಟ್ !

Share It

ಬೆಂಗಳೂರು: ನಮ್ದು  5G ಇಂಟರ್ನೆಟ್, ಫುಲ್ ಸ್ಫೀಡ್ ಗೊತ್ತಾ ಅಂತ ನಾವು ಬಿಲ್ಡಪ್ ತಗೋತೀವಿ. ಆದ್ರೆ, ನಿಮಗೆ ಗೊತ್ತಾ, ಜಪಾನ್ ನಲ್ಲಿ ಇಂಟರ್ನೆಟ್ ಸ್ಫಿಡ್ ಭಾರತದ ಇಂಟರ್ನೆಟ್ ವೇಗದ 16 ಮಿಲಿಯನ್ ಪಟ್ಟು ವೇಗವಾಗಿದೆ.

ಹೌದು. ಇದು ನಿಜ. ಟೆಕ್ನಾಲಜಿ ವಿಷಯದಲ್ಲಿ ಭಾರತಕ್ಕಿಂತ ಬಹಳ ಮುಂದಿರುವ ಜಪಾನ್ ಇಂತಹದ್ದೊಂದು ಇತಿಹಾಸ ಸೃಷ್ಟಿ ಮಾಡಿದೆ. ಜಗತ್ತಿನ ಅತ್ಯಂತ ವೇಗದ ಇಂಟರ್ನೆಟ್ ಬಳಕೆ ಮೂಲಕ ಇತಿಹಾಸ ಸೃಷ್ಡಿಸಿದೆ. ಅವರ ಇಂಟರ್ನೆಟ್ ವೇಗ ಭಾರತದ ಇಂಟರ್ನೆಟ್ ಸ್ಪೀಡ್ ನ 16 ಮಿಲಿಯನ್ ಪಟ್ಟು ವೇಗವಾಗಿ ಕೆಲಸ ಮಾಡುತ್ತದೆ.

ಜಪಾನ್ ಇಂಟರ್ನೆಟ್ ವೇಗ 1.02 ಪೆಟಾಬಿಟ್ಸ್ ಆಗಿದ್ದು, ಇದು ಅಮೇರಿಕಾದ ಇಂಟರ್ನೆಟ್ ವೇಗಕ್ಕಿಂತ 3.5 ಮಿಲಿಯನ್ ಪಟ್ಟು ವೇಗವಾಗಿ ಕಾರ್ಯ ನಿರ್ವಹಿಸುತ್ತಿದೆ. ಭಾರತದ ಸರಾಸರಿ ಇಂಟರ್ನೆಟ್ ವೇಗ 63.55 MBPS ಆಗಿದ್ದು, ಇದರ 16 ಮಿಲಿಯನ್ ಪಟ್ಟು ವೇಗದಲ್ಲಿ ಜಪಾನ್ ನಲ್ಲಿ ಇಂಟರ್ನೆಟ್ ಕಾರ್ಯನಿರ್ವಹಿಸಲಿದೆ.

ಅಮೇರಿಕಾದ ಇಂಟರ್ನೆಟ್ ಸರಾಸರಿ ಸ್ಪೀಡ್ 290 MBPS ಆಗಿದ್ದು, ಜಪಾನ್ ಇಂಟರ್ನೆಟ್ ಸ್ಪೀಡ್ 1,020,000,00 MBPS ಆಗಿದೆ. ನೆಟ್ ಫ್ಲಿಕ್ಸ್ ಸಂಪೂರ್ಣ ಲೈಬ್ರರಿಯನ್ನು ಕೇವಲ ಒಂದು ಸೆಕೆಂಡ್ ನಲ್ಲಿ ಹಾಗೂ 150 GB ಸಾಮರ್ಥ್ಯದ ವಾರ್ ಝೋನ್ ನಂತಹ ಗೇಮ್ಸ್ ಗಳನ್ನು ಕಣ್ಣು ಮಿಟುಕಿಸುವುದರೊಳಗೆ ಡೌನ್ ಲೋಡ್ ಮಾಡಬಹುದಾಗಿದೆ.

ಜಪಾನ್ ನ ಈ ಇಂಟರ್ನೆಟ್ ಕ್ರಾಂತಿ ಮುಂದಿನ ದಿನಗಳಲ್ಲಿ ಜಗತ್ತಿನ ಸಂವಹನ ಸಾಧ್ಯತೆಗಳನ್ನು ಸಂಪೂರ್ಣವಾಗಿ ಬದಲಾಯಿಸಲಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಜಪಾನ್ ನ NICT ಹಾಗೂ ಸುಮಿಟೋಮೋ ಎಲೆಕ್ಟ್ರಿಕ್‌ ಮತ್ತು ಯೂರೋಪಿಯನ್ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದೆ ಎಂದು ಹೇಳಲಾಗಿದೆ.


Share It

You cannot copy content of this page