ಸುದ್ದಿ

ಕೆಡಿಪಿ ಸಭೆಯಲ್ಲಿ ರಮ್ಮಿ ಆಡ್ತಿದ್ದ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ನೋಟೀಸ್ !

Share It

ರಾಯಚೂರು: ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಜುಲೈ 18ರಂದು ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಯು ಅಶಿಸ್ತು ತೋರಿದ್ದಾಗಿ ಖಾಸಗಿ ಸುದ್ದಿವಾಹಿನಿಯಲ್ಲಿ ಪ್ರಸಾರವಾದ ವರದಿಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಶರಣಪ್ರಕಾಶ ಪಾಟೀಲ ಅವರು ಸಭೆಯಲ್ಲಿ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಗೆ ಎದ್ದು ನಿಲ್ಲಿಸಿ ವಿವರಣೆ ಕೇಳಿದರು.

ಈ ವೇಳೆ ಅಧಿಕಾರಿ ಪ್ರವೀಣ ಅವರು ಕ್ಷಮೆ ಕೇಳಿದರು. ಅತ್ಯಂತ ಮಹತ್ವದ ಕೆಡಿಪಿ ಸಭೆಯಲ್ಲಿ ಶಿಸ್ತಿನಿಂದ ಭಾಗಿಯಾಗದೇ ಮೋಬೈಲನಲ್ಲಿ ತಲ್ಲೀಣರಾಗಿ ಅಸಭ್ಯ ವರ್ತನೆ ತೋರಿರುವುದು ಅಕ್ಷಮ್ಯ ಎಂದು ಸಚಿವರು ತರಾಟೆ ತೆಗೆದುಕೊಂಡರು.

ಇದೆ ವೇಳೆ, ಅಧಿಕಾರಿಯನ್ನು ಸಭೆಯಿಂದ ಹೊರ ಕಳುಹಿಸಿದ ಸಚಿವರು, ಅಧಿಕಾರಿಯ ಅಸಭ್ಯ ಕಾರ್ಯವೈಖರಿಯ ಬಗ್ಗೆ ನೋಟೀಸ್ ಜಾರಿ ಮಾಡಿ ಶಿಸ್ತಿನ ಕ್ರಮಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಅವರು ಕೆಡಿಪಿ ಸಭೆಯ ಆಗುಹೋಗುಗಳ ಬಗ್ಗೆ ಆಲಿಸದೇ ರಮ್ಮಿಯಲ್ಲಿ ಮಗ್ನರಾಗಿರುವುದು ಖಾಸಗಿ ಸುದ್ದಿವಾಹಿನಿಯ ಕ್ಯಾಮೆರಾದಲ್ಲಿ‌ ಸೆರೆಯಾಗಿದೆ ಎಂದು ಖಾಸಗಿ ಸುದ್ದಿವಾಹಿನಿಯಲ್ಲಿ ವರದಿಯಾಗಿತ್ತು.


Share It

You cannot copy content of this page