ಉಪಯುಕ್ತ ಸುದ್ದಿ

ಸಾರಿಗೆ ನೌಕರರ ಮೇಲೆ ಎಸ್ಮಾ ಜಾರಿ: ಮುಷ್ಕರ ನಡೆಸದಂತೆ ಕಡಿವಾಣ

Share It

ಬೆಂಗಳೂರು: ಆಗಸ್ಟ್‌ 5ರಿಂದ ಮುಷ್ಕರಕ್ಕೆ ಮುಂದಾಗಿದ್ದ ಸಾರಿಗೆ ನೌಕರರಿಗೆ ಶಾಕ್ ನೀಡಿರುವ ಸರಕಾರ ಅವರ ವಿರುದ್ಧ ಎಸ್ಮಾ ಜಾರಿ ಮಾಡಿದೆ.

ನಾಲ್ಕು ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಆಗಸ್ಟ್‌ 5 ರಂದು ಬೆಳಗ್ಗೆ 6 ಗಂಟೆಯಿಂದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಿತ್ತು. ಆದರೆ, ಕೆಎಸ್‌ಆರ್‌ಟಿಸಿ ಸಾರಿಗೆ ನೌಕರರು ಮುಷ್ಕರ ನಡೆಸದಂತೆ ಎಸ್ಮಾ ಜಾರಿ ಮಾಡಿದೆ.

ಕರ್ನಾಟಕ ಅಗತ್ಯಾ ಸೇವಾ ನಿರ್ವಹಣಾ ಕಾಯಿದೆ 2013ರ ಅಡಿ ಆರು ತಿಂಗಳ ಕಾಲ ಸಾರಿಗೆ ನೌಕರರು ಯಾವುದೇ ಮುಷ್ಕರದಲ್ಲಿ ಭಾಗವಹಿಸುವಂತಿಲ್ಲ. ಹೀಗಾಗಿ ಜುಲೈ 1ರಿಂದ ಡಿಸೆಂಬರ್ 12ರವರೆಗೆ ಸಾರಿಗೆ ನಿಗಮಗಳಲ್ಲಿ ಯಾವುದೇ ಮುಷ್ಕರವನ್ನು ನಡೆಸದಂತೆ ನಿಬರ್ಂಧ ಹೇರಲಾಗಿದೆ.


Share It

You cannot copy content of this page