ಅಪರಾಧ ಸುದ್ದಿ

ಧರ್ಮಸ್ಥಳ ಬಳಿ ಹೂತಿಟ್ಟ ಶವಗಳ ಕೇಸ್: 6ನೇ ಪಾಯಿಂಟ್ ನಲ್ಲಿ 10 ಮೂಳೆಗಳು ಪತ್ತೆ!

Share It

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಪ್ರಸಿದ್ಧ ಜನಪ್ರಿಯ ಧಾರ್ಮಿಕ ಸ್ಥಳ ಧರ್ಮಸ್ಥಳದ ನೇತ್ರಾವತಿ ನದಿ ತೀರದ ಆಸುಪಾಸಲ್ಲಿ ಶವಗಳ ಹೂತಿಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೊನೆಗೂ ಏಳೆಂಟು ಮೂಳೆಗಳು ಸಿಕ್ಕಿವೆ.

ಇಂದು ಗುರುವಾರ ಎಸ್ಐಟಿ ಅಧಿಕಾರಿಗಳು ದೂರುದಾರ ತೋರಿಸಿದ ಜಾಗದಲ್ಲಿ 6ನೇ ಪಾಯಿಂಟ್ ನಲ್ಲಿ ಗುಂಡಿ ಅಗೆದಿದ್ದಾರೆ. ಈ ವೇಳೆ ತಲೆಬುರುಡೆ ಸೇರಿ 10 ಮೂಳೆಗಳು ಸಿಕ್ಕಿವೆ ಎಂದು ತಿಳಿದುಬಂದಿದೆ. 6ನೇ ಪಾಯಿಂಟ್ ನಲ್ಲಿ ಅಸ್ತಿಪಂಜರದ ಮೂಳೆಗಳು ಪತ್ತೆಯಾಗಿವೆ ಎಂದು ಎಸ್‌ಐಟಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 6ನೇ ಪಾಯಿಂಟ್ ನಲ್ಲಿ ಪುರುಷನ ತಲೆಬುರುಡೆ ಸೇರಿದಂತೆ 10 ಮೂಳೆಗಳು ಸಿಕ್ಕ ಮಾಹಿತಿಯನ್ನು ಎಸ್‌ಐಟಿ ಹಂಚಿಕೊಂಡಿದೆ.

ಆದರೆ ಸಂಪೂರ್ಣವಾದ ಅಸ್ಥಿಪಂಜರ ಇನ್ನು ಸಿಕ್ಕಿಲ್ಲ, ಇಷ್ಟಾದರೂ ಪುರುಷನ ತಲೆಬುರುಡೆ ಸೇರಿದಂತೆ ಏಳೆಂಟು ಮೂಳೆಗಳು ಸಿಕ್ಕಿವೆ. ಇದೀಗ ಈ ಒಂದು ಪ್ರಕರಣ ಮತ್ತಷ್ಟು ಕುತೂಹಲಕ್ಕೆ ತೆಗೆದುಕೊಂಡು ಹೋಗುತ್ತದೆ. ಇವು ಪುರುಷನ ದೇಹದ ತಲೆಬುರುಡೆ, ಕೈ-ಕಾಲಿನ ಮೂಳೆಗಳು ಎನ್ನಲಾಗಿವೆ. ಸದ್ಯ 6ನೇ ಪಾಯಿಂಟ್ ನಲ್ಲಿ ಎಸ್ಐಟಿ ತಂಡದಿಂದ ಶೋಧಕಾರ್ಯ ಮುಕ್ತಾಯಗೊಂಡಿದೆ.

ಮೂಳೆಗಳು ಸಿಕ್ಕ ಬಗ್ಗೆ ಅಧಿಕಾರಿಗಳು ಲ್ಯಾಪ್ಟಾಪ್ ನಲ್ಲಿ ದಾಖಲು ಮಾಡಿಕೊಂಡಿದ್ದಾರೆ, ಮೂಳೆ ಸಿಕ್ಕ ಕುರಿತ ಮಾಹಿತಿಯನ್ನು ಅಧಿಕಾರಿಗಳು ಲ್ಯಾಪ್ಟಾಪ್ ನಲ್ಲಿ ದಾಖಲು ಮಾಡಿಕೊಂಡಿದ್ದಾರೆ. ಜೀಪ್ ನಲ್ಲಿ ಆನ್ ಮಾಡಿಕೊಂಡು ರಿಪೋರ್ಟ್ ದಾಖಲು ಮಾಡಿದ್ದಾರೆ, ಎಲ್ಲ ಮಾಹಿತಿಯನ್ನು ನಿಖರವಾಗಿ ಲ್ಯಾಪ್ಟಾಪ್ ನಲ್ಲಿ ಅಧಿಕಾರಿಗಳು ದಾಖಲಿಸಿದ್ದಾರೆ.


Share It

You cannot copy content of this page