ಬೆಂಗಳೂರು: ಕೆಂಪೇಗೌಡ ಬಸ್ ನಿಲ್ದಾಣದ
ಧನ್ವಂತರಿ ರಸ್ತೆಗೆ ಹೊಂದಿಕೊಂಡಂತೆ ಯಾವುದೇ ಬ್ಯಾಂಕ್ ಎಟಿಎಂ ಸೌಲಭ್ಯವಿರಲಿಲ್ಲ. ಹೀಗಾಗಿ, ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಎಟಿಎಂ ಉದ್ಘಾಟನೆ ಮಾಡಲಾಯಿತು.
ಮೆಜೆಸ್ಟಿಕ್ ನಲ್ಲಿ ನಿಗಮದ ಸಿಬ್ಬಂದಿ ಹಾಗೂ ಪ್ರಯಾಣಿಕರು ತುರ್ತು ಕೆಲಸಕ್ಕಾಗಿ ಹಣಪಡೆಯಲು ತೊಂದರೆ ಅನುಭವಿಸುತ್ತಿದ್ದರು. ಇದನ್ನು ಮನಗಂಡು ಧನ್ವಂತರಿ ರಸ್ತೆಗೆ ಹೊಂದಿಕೊಂಡಂತೆ ಕೆಂಪೇಗೌಡ ಬಸ್ ನಿಲ್ದಾಣದ ಟರ್ಮಿನಲ್ 1 ರ ಮುಖ್ಯ ರಸ್ತೆಯಲ್ಲಿ ಇಂಡಿಯನ್ ಓವರ್ ಸೀಸ್ ಬ್ಯಾಂಕ್ ಎಟಿಎಂ ಅನ್ನು ಪ್ರಾರಂಭಿಸಲಾಯಿತು.
ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷಾ ಶಾಖೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಉಮೇಶಕುಮಾರ್ ಸಿಂಗ್, ಪ್ರಾದೇಶಿಕ ಮುಖ್ಯಸ್ಥರು, ಇಂಡಿಯನ್ ಈವರ್ ಸೀಸ್ ಬ್ಯಾಂಕ್, ಬೆಂಗಳೂರು ವಲಯ, ಸಂತೋಷ ಕುಮಾರ್ ಪಾಂಡೆ, ಎಜಿಎಂ, IOB, ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಬಸ್ ನಿಲ್ದಾಣದ ಪರಿವೀಕ್ಷಣೆ ನಡೆಸಿದ ವ್ಯವಸ್ಥಾಪಕ ನಿರ್ದೇಶಕರು ಮುಂಗಡ ಟಿಕೇಟ್ ಕಾಯ್ದಿರಿಸುವ ಕೇಂದ್ರ, ವಾಣಿಜ್ಯ ಮಳಿಗೆಗಳು, ಒಪ್ಪಂದ ಮೇರೆಗೆ ನೀಡುವ ವಾಹನ ಕೇಂದ್ರ, ಬಸ್ ನಿಲ್ದಾಣದ ಸ್ವಚ್ಛತೆಯ ವೀಕ್ಷಣೆ ನಡೆಸಿದರು.

