ಬೆಂಗಳೂರು: ರಾಯಲ್ ಚಾಲೆಂರ್ಸ್ ಬೆಂಗಳೂರು ತಂಡ ಯಾವಾಗಲೂ ನಿರೀಕ್ಷೆಗಳ ಮಹಾಪೂರವನ್ನೇ ಹುಟ್ಟುಹಾಕಿ ಆಡುತ್ತದೆ. ಇದೀಗ ಎಲ್ಲವೂ ಮುಗಿದೇಹೋಯ್ತು ಎಂಬ ಹೊತ್ತಿನಲ್ಲಿ ಹೊಸದೊಂದು ನಿರೀಕ್ಷೆ ಹುಟ್ಟುಹಾಕಿದೆ
೨೦೨೪ರ ಐಪಿಎಲ್ ಅಭಿಯಾನದಲ್ಲಿ ಮೊದಲ ಪಂದ್ಯವನ್ನೇ ಗೆದ್ದು ಬೀಗಿದ ಆರ್ಸಿಬಿ, ಇನ್ನು ನಂತರ ಸತತ ಸೋಲುಗಳನ್ನೇ ಕಾಣುತ್ತಾ ಬಂದಿತ್ತು. ಮೊದಲ ಏಳು ಪಂದ್ಯಗಳಲ್ಲಿ ಸತತ ಆರು ಸೋಲುಗಳನ್ನು ಕಾಣುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಇನ್ನೇನು ಪಂದ್ಯಾವಳಿಯಿAದ ಹೊರನಡೆಯುವುದೇ ಎಂದುಕೊಳ್ಳಲಾಗಿತ್ತು.
ಆದರೆ, ಕಳೆದ ಮೂರು ಪಂದ್ಯಗಳಲ್ಲಿ ಆರ್ಸಿಬಿಯ ಆಟ ಬಹಳಷ್ಟು ಸುಧಾರಣೆಯಾಗಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ವಿಭಾಗದಲ್ಲಿ ಭರ್ಜರಿ ಪ್ರದರ್ಶನ ಬರುತ್ತಿದೆ. ಬೌಲಿಂಗ್ನಲ್ಲಿ ಸ್ವಪ್ನಿಲ್ ಸಿಂಗ್ ಕಮಾಲ್ ಮಾಡಿದರೆ, ಮಹಮದ್ ಸಿರಾಜ್ ಲಯಕ್ಕೆ ಮರಳಿದ್ದಾರೆ. ವೈಶಾಖ್ ವಿಜಯ್ ಕುಮಾರ್ ವಿಕೆಟ್ ಪಡೆದುಕೊಳ್ಳುವಲ್ಲಿ ಸಫಲವಾಗುತ್ತಿದ್ದಾರೆ.
ಬ್ಯಾಟಿಂಗ್ನಲ್ಲಿ ಎಂದಿನAತೆ ಕಿಂಗ್ ಕೋಹ್ಲಿ ಅಬ್ಬರಿಸಿದರೆ, ನಾಯಕ ಪಾಪ್ ಡುಪ್ಲೆಸಿಸ್ ಆಗಾಗ ಸಿಡಿಯುತ್ತಿದ್ದಾರೆ. ಉಳಿದಂತೆ ವಿಲ್ ಜಾಕ್ಸ್ ಎದುರಾಳಿಗಳಿಗೆ ಶಾಕ್ ಕೊಡುವಂತಹ ಬ್ಯಾಟಿಂಗ್ ಮಾಡುತ್ತಾರೆ. ರಜತ್ ಪಟೇದಾರ್ ಭರ್ಜರಿ ಫಾರ್ಮ್ನಲ್ಲಿದ್ದರೆ, ಕೊನೆಯಲ್ಲಿ ದಿನೇಶ್ ಕಾರ್ತಿಕ್ ಬೆಸ್ಟ್ ಫಿನಿಶರ್ ರೋಲ್ ಪ್ಲೇ ಮಾಡುತ್ತಿದ್ದಾರೆ. ಈ ಎಲ್ಲ ಅಂಶಗಳಿAದ ಆರ್ಸಿಬಿ ಜಯದ ಮೆಟ್ಟಿಲೇರುತ್ತಿದೆ.
ಕಳೆದ ಮೂರು ಪಂದ್ಯದಿAದ ಆರ್ಸಿಬಿಗೆ ಪ್ರತಿ ಪಂದ್ಯವೂ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿಕೊಳ್ಳುತ್ತಿದೆ. ಇದೇ ತಂಡದ ಗೆಲುವಿಗೆ ಸಹಕಾರಿಯಾಗುತ್ತಿದೆ. ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಂಯನಲ್ಲಿ ನಡೆದ ಪಂದ್ಯದಲ್ಲಿಯೂ ಆರ್ಸಿಬಿ ಜಯದ ನಗೆ ಬೀರಿದೆ. ಗುಜರಾತ್ ಟೈಟಾನ್ಸ್ ತಂಡವನ್ನು ೩೬ ಎಸೆತಗಳು ಬಾಂಕಿಯಿರುವAತೆಯೇ ಸೋಲಿಸಿ, ಅಂಕಪಟ್ಟಿಯಲ್ಲಿ ಏಳನೇ ಸ್ಥಾನಕ್ಕೇರಿದೆ.
ಪಂದ್ಯಾವಳಿಯುದ್ದಕ್ಕೂ ಕೊನೆಯ ಸ್ಥಾನದಲ್ಲಿದ್ದ ಆರ್ಸಿಬಿ, ಈ ಪಂದ್ಯದ ನಂತರ ಏಳನೇ ಸ್ಥಾನಕ್ಕೇರಿದೆ. ರನ್ರೇಟ್ ಕೂಡ ಉತ್ತಮವಾಗಿದ್ದು, ಫ್ಲೇ ಆಪ್ ಹಂತಕ್ಕೆ ಪೈಪೋಟಿ ನೀಡುವ ಎಲ್ಲ ಸಾಧ್ಯತೆಗಳಿವೆ. ಆರ್ಸಿಬಿಯ ಕೊನೆಯ ಕ್ಷಣದ ಈ ಪ್ರದರ್ಶನ ಅಭಿಮಾನಿಗಳಲ್ಲಿ ರೋಮಾಂಚಜ ತರಿಸುತ್ತಿದೆ. ಆರ್ಸಿಬಿ ಕ್ರೇಜ್ ಇದರಿಂದ ಮತ್ತಷ್ಟು ಹೆಚ್ಚುತ್ತಿದ್ದು, ಈ ಸಲ ಕಪ್ ನಮ್ಮದೇ ಆಗಲಿ ಎಂಬುದು ಅಭಿಮಾನಿಗಳ ಆಶಯ