ಬೆಂಗಳೂರು: ಹೊಸದಾಗಿ ಲೋಕಾರ್ಪಣೆಯಾದ ಹಳದಿ ಮಾರ್ಗದ ಮೆಟ್ರೋ ಮಾರ್ಗಗಳಲ್ಲಿ ಫೀಢರ್ ಸೇವೆ ಒದಗಿಸುವ ಬಸ್ ಗಳಿಗೆ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಚಾಲನೆ ನೀಡಿದರು.
ಸಾರ್ವಜನಿಕ ಸೇವೆಗೆ ಮೆಟ್ರೋ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಸಂಸ್ಥೆಯು ಹಳದಿ ಮಾರ್ಗದಲ್ಲಿ ಪರಿಚಯಿಸಿರುವ ಹೊಸ ಮೆಟ್ರೋ ಫೀಡರ್ ಬಸ್ ಮಾರ್ಗಗಳನ್ನು ಉದ್ಘಾಟನೆ ಮಾಡಲಾಯಿತು.

ಸಮಾರಂಭದಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ರಾಮಚಂದ್ರನ್.ಆರ್, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ; ಮಾಹಿತಿ ತಂತ್ರಜ್ಞಾನ ನಿರ್ದೇಶಕರಾದ ಶಿಲ್ಪ ಎಂ., ಭದ್ರತೆ ಮತ್ತು ಜಾಗೃತ ನಿರ್ದೇಶಕ ಅಬ್ದುಲ್ ಅಹದ್, ಎಲೆಕ್ಟ್ರಾನಿಕ್ ಸಿಟಿ ಇಂಡಸ್ಟ್ರಿಯಲ್ ಅಸೋಸಿಯೇಷನ್ ELCIA & ELCITA ಅಧಿಕಾರಿಗಳು ಸೇರಿ ಸಂಸ್ಥೆ ಅಧಿಕಾರಿಗಳು ಮತ್ತು ಸಂಸ್ಥೆಯ ಸಿಬ್ಬಂದಿ ಭಾಗವಹಿಸಿದ್ದರು.
