ಕಲಬುರಗಿ: ಸಾಲಬಾಧೆ ತಾಳಲಾರದೆ ರೈತನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ತಾಲೂಕಿನ ಫರಹತಾಬಾದ್ ಹೋಬಳಿ ವ್ಯಾಪ್ತಿಯಲ್ಲಿನ ಕವಲಗಾ ಬಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಹಣಮಂತಪ್ಪಾ ತಂದೆ ಬಸವರಾಜ ಮೋಸಂಡಿ (೩೫) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ರೈತನಾಗಿದ್ದು, ರಾಷ್ಟ್ರೀಕೃತ ಬ್ಯಾಂಕಿನಲ್ಲಿ ೨ ಲಕ್ಷ, ಕೃಷಿಗಾಗಿ ಖಾಸಗಿಯಾಗಿ ೩.೫ ಲಕ್ಷ ಸಾಲ ಮಾಡಿಕೊಂಡಿದ್ದನು.
ಹೊಲದಲ್ಲಿ ಹತ್ತಿ ಬೆಳೆದು,ಹತ್ತಿಯಿಂದ ಬಂದ ಆದಾಯದಲ್ಲಿ ಸಾಲ ತಿರಿಸಬೇಕು ಎಂದು ಯೋಜನೆ ಹಾಕಿಕೊಂಡಿದ್ದ ರೈತ ಹಣಮಂತಪ್ಪ ಮೋಸಂಡಿ,ಕಳೆದ ಐದಾರು ದಿನಗಳಿಂದ ಸುರಿದ ವಿಪರೀತ ಮಳೆಯಿಂದಾಗಿ ಬೆಳೆದ ಹತ್ತಿ ಎಲ್ಲಾ ಕೈಗೆಟಕದು ಎಂದು ಭಾವಿಸಿ, ಹೊದಲಲ್ಲಿನ ಬಾವಿ ದಂಡಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.