ಬೆಂಗಳೂರು: ಸಹನಟಿಯಿಂದ ಅತ್ಯಾಚಾರ ಆರೋಪಕ್ಕೆ ಗುರಿಯಾಗಿದ್ದ ನಟ ಮಡೆನೂರು ಮನು, ಇದೀಗ ಆ ಪ್ರಕರಣ ಸುಖಾಂತ್ಯಗೊಳಿಸಿಕೊಂಡಿದ್ದು, ತಮ್ಮ ಎರಡನೇ ಚಿತ್ರದ ಟೈಟಲ್ ಲಾಂಚ್ ಗೆ ಸಿದ್ಧತೆ ನಡೆಸಿದ್ದಾರೆ.
ಸೆಪ್ಟೆಂಬರ್10 ರಂದು ಮನು ಹುಟ್ಟುಹಬ್ಬದ ಪ್ರಯುಕ್ತ ತಮ್ಮ ಎರಡನೇ ಚಿತ್ರದ ಟೈಟಲ್ ಲಾಂಚ್ ಮಾಡಲು ಮನು ತೀರ್ಮಾನಿಸಿದ್ದಾರೆ. ಸಿನಿಮಾ ಜೆ.ಕೆ. ಮೂವೀಸ್ ಬ್ಯಾನರ್ ನಲ್ಲಿ ಮೂಡಿಬರಲಿದ್ದು, ಎಂ.ನಟರಾಜ್ ನಿರ್ಮಾಪಕರಾಗಿದ್ದಾರೆ.
ನಿರ್ದೇಶಕ ಹಾಗೂ ಇನ್ನಿತರ ತಾಂತ್ರಿಕ ವರ್ಗ ಮತ್ತು ಕಲಾವಿದರು ಅಂತಿಮಗೊಳ್ಳಬೇಕಿದ್ದು, ಟೈಟಲ್ ನೊಂದಣಿಯಾಗಿದ್ದು, ಸೆ. 10 ರಂದು ಘೋಷಣೆ ಮಾಡಲು ಚಿತ್ರತಂಡ ತೀರ್ಮಾನಿಸಿದೆ. ಈ ನಡುವೆ ಮನು ತಮ್ಮ ಮೊದಲ ಚಿತ್ರ ಕುಲದಲ್ಲಿ ಕೀಳ್ಯಾವುದೋ ಚಿತ್ರದ ಮರುಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.