ಬೆಂಗಳೂರು: ನೆಲಮಂಗಲ ಪ್ರಾದೇಶಿಕ ಸಾರಿಗೆ ಕಛೇರಿಯಲ್ಲಿ ಅಧಿಕಾರಿಯಿಂದ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನೀಡಿರುವ ಬಗ್ಗೆ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗಿರುವ ಬಗ್ಗೆ ಸಾರಿಗೆ ಹಾಗೂ ಮುಜರಾಯಿ ಸಚಿವರ ಗಮನಕ್ಕೆ ಬಂದಿದ್ದು, ಈ ಬಗ್ಗೆ ಕೂಡಲೇ ಸೂಕ್ತ ಶಿಸ್ತಿನ ಕ್ರಮ ತೆಗೆದುಕೊಳ್ಳಲು ಸಾರಿಗೆ ಆಯುಕ್ತರಿಗೆ ಸೂಚಿಸಿದ್ದಾರೆ.
ಅದರಂತೆ ಸಾರಿಗೆ ಆಯುಕ್ತರು, ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿರಾಜ್ ಕುಮಾರ್, ಇವರ ಕಾರ್ಯ ನಿರ್ವಹಣಾ ವ್ಯವಸ್ಥೆಯನ್ನು ನೆಲಮಂಗಲದಲ್ಲಿ ರದ್ದುಪಡಿಸಿ ಅವರ ಮೂಲ ಕಛೇರಿಯಾದ ಬೆಂಗಳೂರು (ಪಶ್ಚಿಮ) ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಗೆ ಹಿಂದಿರುಗಿಸಿ ಆದೇಶಿಸಿದ್ದಾರೆ.
ಅದೇ ರೀತಿ ಮಹಿಳಾ ಸಿಬ್ಬಂದಿ ಮೂಲ ಕಛೇರಿಯಾದ ತುಮಕೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಗೆ ಹಿಂದಿರುಗಿಸಿ ಆದೇಶಿದ್ದು, ಮುಂದುವರಿದು, ಇಲಾಖೆಯ ಆಂತರಿಕ ಮಹಿಳಾ ದೌರ್ಜನ್ಯ ಸಮಿತಿಗೆ ಲೈಂಗಿಕ ಕಿರುಕುಳ ದೂರನ್ನು ವರ್ಗಾಯಿಸಿದ್ದು ಮುಂದಿನ ವಿಚಾರಣೆ ನಡೆಯಲಿದೆ.