ಬೆಳಗಾವಿ : ಸವದತ್ತಿ ತಾಲೂಕಿನ ಹಲಕಿ–ಮುರಗೋಡ ರಸ್ತೆಯಲ್ಲಿ ಗುರುವಾರ ಮಧ್ಯರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮುರಗೋಡ ಗ್ರಾಮದ ಹೊರವಲಯದಲ್ಲಿ ಅಪರಿಚಿತ ವಾಹನವೊಂದು ಬೈಕ್ ಸವಾರರ ಮೇಲೆ ಹಾಯ್ದ ಪರಿಣಾಮ ಈ ದುರಂತ ಸಂಭವಿಸಿದೆ.
ಅಪಘಾತದ ತೀವ್ರತೆಯಿಂದ ಇಬ್ಬರು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ಮೃತರನ್ನು ಸವದತ್ತಿ ತಾಲೂಕಿನ ಹುಲಿಕೇರಿ ತಾಂಡಾದ ನಿವಾಸಿಗಳಾದ ವಿಶಾಲ ಲಮಾಣಿ (20)ಮತ್ತು ಅಪ್ಪು ಲಮಾಣಿ (23)ಎಂದು ಗುರುತಿಸಲಾಗಿದೆ.
ರಸ್ತೆಯ ಮೇಲೆಯೇ ರಕ್ತಸಿಕ್ತ ಸ್ಥಿತಿಯಲ್ಲಿ ಬಿದ್ದ ಯುವಕರ ಮೃತದೇಹವನ್ನು ಕಂಡು ಕುಟುಂಬಸ್ಥರು ಆಘಾತಗೊಂಡಿದ್ದು, ಗ್ರಾಮದಲ್ಲಿ ಶೋಕಸಂತಪ್ತ ವಾತಾವರಣ ನಿರ್ಮಾಣವಾಗಿದೆ.