ಸುದ್ದಿ

ಧರ್ಮಸ್ಥರ ಪ್ರಕರಣ: ಎಸ್‌ಐಟಿಯಿಂದ ಸತ್ಯಾಂಶ ಬಯಲು: ಡಾ. ಜಿ. ಪರಮೇಶ್ವರ್

Share It


ಬೆAಗಳೂರು: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆಸಂಬಂಧಪಟ್ಟಂತೆ ಎಸ್‌ಐಟಿ ತನಿಖೆ ನಡಿತಿದ್ದು, ಈಗ ನಾವು ಉತ್ತರ ಕೊಡುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ತನಿಖೆ ಮುಗಿದ ಮೇಲೆ ನೋಡೋಣ. ಯಾರ್ಯಾರ ಪಾತ್ರ ಇದೆ ಅದೆಲ್ಲವೂ ತನಿಖೆ ಆಗ್ತಿದೆ. ಎಲ್ಲವೂ ತನಿಖೆಯಲ್ಲಿ ಅಂತಿಮವಾಗಿ ಹೊರಗೆ ಬರುತ್ತೆ. ಸೋನಿಯಾ ಗಾಂಧಿ ಅವರಿಗೆ ಕೆಲವರು ಪತ್ರ ಬರೆದಿರೋದು ಗೊತ್ತಿಲ್ಲ. ಎಸ್‌ಐಟಿ ತನಿಖೆ ನಡೆಯುವಾಗ ನಾನಾಗಲೀ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಲೀ ಯಾರೂ ಹಸ್ತಕ್ಷೇಪ ಮಾಡೋದಿಲ್ಲ ಎಂದು ತಿಳಿಸಿದರು.

ಮದ್ದೂರು ಗಣೇಶೋತ್ಸವ ವೇಳೆ ಕಲ್ಲು ತೂರಾಟ ಇತರೆ ಪ್ರಕರಣಗಳು ನಡೆದಿರುವ ಹಿನ್ನೆಲೆ ಗಲಾಟೆ ಮಾಡಿದವರ ಬಂಧನ ಆಗಿದೆ. ಕೆಲವು ಕಡೆ ಸಣ್ಣಪುಟ್ಟ ಘಟನೆ ಆಗಿವೆ. ಒಂದು ಕಡೆ ಚಿಕ್ಕ ಮಕ್ಕಳು ಮೆರವಣಿಗೆ ವೇಳೆ ಮೇಲಿಂದ ಉಗಿಳಿದಿದ್ದಾರೆ. ಎಲ್ಲವೂ ನಿಯಂತ್ರಣದಲ್ಲಿದೆ. ಪೊಲೀಸ್ ಭದ್ರತೆ ನಿಯೋಜನೆ ಮಾಡಲಾಗಿದೆ. ಪದೇ ಪದೇ ಈ ಥರ ಘಟನೆಗಳಾಗುತ್ತಿವೆ ಎಂದರೆ ಜನ ಸಹ ಸ್ಪಂದಿಸಬೇಕು.

ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದೇವೆ. ಎಲ್ಲ ರೀತಿಯ ಕ್ರಮಗಳನ್ನೂ ಈ ಬಾರಿಯ ಗಣೇಶೋತ್ಸವಗಳ ವೇಳೆ ಕೈಗೊಂಡಿದ್ದೇವೆ. ಸೂಕ್ಷ್ಮ ಪ್ರದೇಶಗಳಿಗೆ ಹಿರಿಯ ಅಧಿಕಾರಿಗಳೂ ಭೇಟಿ ಕೊಟ್ಟಿದ್ದಾರೆ. ಒಂದೆರಡು ಮೂರು ಕಡೆ ಸಣ್ಣಪುಟ್ಟ ಘಟನೆಗಳಾಗಿವೆ, ಕ್ರಮ ತಗೊಂಡಿದ್ದೇವೆ. ಬಿಜೆಪಿಯವರು ಆರೋಪ ಮಾಡ್ತಾರೆ, ಅದೇ ಕೆಲಸ ಅವರದ್ದು ಎಂದು ಪರಮೇಶ್ವರ್ ಹೇಳಿದರು.


Share It

You cannot copy content of this page