ಬೆಂಗಳೂರು: ವಾಣಿಜ್ಯ ಬಳಕೆ ಮತ್ತು ಕೈಗಾರಿಕೆಗಳ ವಿದ್ಯುತ್ ದರ ಏರಿಕೆಗೆ ಬೆಸ್ಕಾಂ ಚಿಂತನೆ ನಡೆಸಿದ್ದು, ಕರ್ನಾಟಕ ವಿದ್ಯುಚ್ಛಕ್ಕಿ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ರಾಜ್ಯ ಸರ್ಕಾರದ ಒಡೆತನದಲ್ಲಿರುವ ವಿದ್ಯುತ್ ವಿತರಣಾ ಕಂಪನಿಗಳು ಕೃಷಿ ಪಂಪ್‌ಸೆಟ್‌ಗೆ ವಿದ್ಯುತ್ ದರ ಕಡಿಮೆ ಮಾಡಿ ಕೈಗಾರಿಕೆ ಮತ್ತು ವಾಣಿಜ್ಯ ಬಳಕೆಗೆದಾರರಿಗೆ ಪ್ರತಿ ಯೂನಿಟ್‌ಗೆ ೧೦ ಪೈಸೆಯಿಂದ ೧ ರೂ. ಹೆಚ್ಚಿಸಲು ತಯಾರಿ ನಡೆಸಿವೆ. ಇದಕ್ಕೆ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಮಹಾಸಂಸ್ಥೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ನೀರಾವರಿ ಉದ್ದೇಶಕ್ಕಾಗಿ ರೈತರು ಪಂಪ್ ಸೆಟ್ಗಳಿಗೆ ಪ್ರೋತ್ಸಾಹ ಯೋಜನೆಯಡಿ ಬಳಕೆ ಮಾಡುತ್ತಿರುವ ವಿದ್ಯುತ್ಗೆ ಸರ್ಕಾರ ಸಮರ್ಪಕವಾಗಿ ಸಬ್ಸಿಡಿ ಹಣ ಬಿಡುಗಡೆ ಮಾಡುತ್ತಿಲ್ಲ. ಹೀಗಾಗಿ ಬೆಸ್ಕಾಂಗೆ ಆದಾಯದಲ್ಲಿ ಹಿನ್ನಡೆಯುಂಟಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಬಜೆಟ್‌ನಲ್ಲಿ ಸರ್ಕಾರ ನೀಡಿರುವುದು ೧೬೦೨೧ ಕೋಟಿ ರೂ. ಮಾತ್ರ. ರಾಜ್ಯ ಸರ್ಕಾರ ಬಾಕಿ ಉಳಿದಿರುವ ಸಬ್ಸಿಡಿಯನ್ನ ಹೆಚ್ಚುವರಿಯಾಗಿ ೨,೩೬,೨೪೭ ಕೋಟಿ ರೂ. ನೀಡಿದರೂ ೧೨೧೪.೧೨ ಕೋಟಿ ರೂ. ಕೊರತೆ ಉಂಟಾಗಲಿದೆ.
ಇದನ್ನು ಸರಿತೂಗಿಸಲು ಕೈಗಾರಿಕೆ ಮತ್ತು ವಾಣಿಜ್ಯ ಬಳಕೆದಾರರ ಮೇಲೆ ಪ್ರತಿ ಯೂನಿಟ್‌ಗೆ ೧೦ ಪೈಸೆಯಿಂದ ೧ ರೂ. ವರೆಗೆ ಹೆಚ್ಚಿಸಲು ಇದೀಗ ಕೋರಲಾಗಿದೆ. ಆದರೆ, ಯಾರದ್ದೋ ಹೊರೆಯನ್ನ ವಾಣಿಜ್ಯ ಹಾಗೂ ಕೈಗಾರಿಕಾ ವಲಯದ ಮೇಲೆ ಹೇರುವುದು ಸರಿಯಲ್ಲ ಎಂದು ಎಫ್ಕೆಸಿಸಿಐ ಅಸಮಾಧಾನ ಹೊರಹಾಕಿದೆ.