ಬೆಂಗಳೂರು: ಮಹಿಳೆ ಮೇಲೆ ಲಾಂಗ್ ಬೀಸಿ ಕೈ ಬೆರಳನ್ನು ಕಟ್ ಮಾಡಿ ಚಿನ್ನದ ಸರ ಕದ್ದಿರುವ ಘಟನೆ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರಿ ನಗರದಲ್ಲಿ ನಡೆದಿದೆ.
ಗಣೇಶ ಹಬ್ಬದ ಆರ್ಕೆಸ್ಟ್ರಾ ನೋಡಿ ಮನೆಗೆ ತೆರಳುತ್ತಿದ್ದ ಉಷಾ ಮತ್ತು ವರಲಕ್ಷ್ಮೀ ಅವರ ಮೇಲೆ ದಾಳಿ ಮಾಡಿದ ಕಳ್ಳರು ಮಹಿಳೆಯರ ಕುತ್ತಿಗೆಗೆ ಲಾಂಗ್ ಇಟ್ಟು, ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದಾರೆ. ಉಷಾ ಭಯದಿಂದ ತನ್ನ ೧೦ ಗ್ರಾಂ ಚಿನ್ನದ ಸರ ಕೊಟ್ಟಿದ್ದಾರೆ. ವರಲಕ್ಷ್ಮೀ ಚಿನ್ನದ ಸರ ನೀಡಲು ನಿರಾಕರಿಸಿದ್ದಾರೆ.
ಈ ವೇಳೆ ಆಕೆಯ ಕೈ ಬೆರಳುಗಳನ್ನೇ ದುಷ್ಕರ್ಮಿಗಳು ಕಟ್ ಮಾಡಿ ಈ ವೇಳೆ ಆರೋಪಿಗಳು ಗ್ರಾಂ ಚಿನ್ನದ ಸರ ಕಸಿದುಕೊಂಡು ಪರಾರಿಯಾಗಿದ್ದಾರೆ. ಗಿರಿನಗರ ಪೊಲೀಸ್ ಠಾಣೆಯಲ್ಲಿ ಈ ಸಂಬ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಹಿಡಿಯಲು ಪ್ರತ್ಯೇಕ ತಂಡವನ್ನು ರಚಿಸಲಾಗಿದೆ.