ಅಪರಾಧ ಸುದ್ದಿ

ವಿವಾಹಿತೆಯೊಂದಿಗೆ ಅನೈತಿಕ ಸಂಬಂಧ ? ಯುವಕನ ಕೊಚ್ಚಿ ಕೊಲೆ

Share It

ಬೆಳಗಾವಿ : ಹುಕ್ಕೇರಿ ತಾಲೂಕಿನ ಶಹಾಬಂದರ ಗ್ರಾಮದಲ್ಲಿ ಬುಧವಾರ ರಾತ್ರಿ ಯುವಕನೊಬ್ಬ ಬಸ್ ನಿಂದ ಇಳಿಯುತ್ತಿದಂತೆ ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಯುವಕ ಬುಧವಾರ ರಾತ್ರಿ ಬಸ್ ನಿಂದ ಇಳಿದು ಮ ನೆಕಡೆ ಹೊರಟ್ಟಿದ್ದ. ಈ ವೇಳೆ ಏಕಾಎಕಿ ದುಷ್ಕರ್ಮಿಗಳು ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಮಹಾಂತೇಶ ಬುಕನಟ್ಟಿ (24) ಕೊಲೆಯಾದ ಯುವಕ. ಯುವಕನನ್ನು ಕೊಲೆ ಮಾಡಿದ ಆರೋಪಿಗಳು ಸ್ಥಳದಲ್ಲೇ ಮಚ್ಚು ಬಿಟ್ಟು ಪರಾರಿಯಾಗಿದ್ದಾರೆ.

ಸ್ಥಳಕ್ಕೆ ಯಮಕನಮರಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈತ ವಿವಾಹಿತೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು ಇದೇ ಕೊಲೆಗೆ ಪ್ರಮುಖ ಕಾರಣ ಎನ್ನಲಾಗುತ್ತಿದೆ.


Share It

You cannot copy content of this page