ರಾಜಕೀಯ ಸುದ್ದಿ

ನಿರುದ್ಯೋಗಿ ಪದವೀಧರರಿಗೆ ಮಾಸಿಕ ರೂ.1,000 : ಸಿಎಂ ನಿತೀಶ್​ ಕುಮಾರ್

Share It

ಪಾಟ್ನಾ (ಬಿಹಾರ): ವಿಧಾನಸಭಾ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಹಲವಾರು ತಂತ್ರ ರೂಪಿಸಿರುವ ಸಿಎಂ ನಿತೀಶ್​ ಕುಮಾರ್​, ಇದೀಗ ನಿರುದ್ಯೋಗಿ ಪದವೀಧರರಿಗೆ ಎರಡು ವರ್ಷಗಳ ಅವಧಿವರೆಗೆ ಮಾಸಿಕ 1000 ರೂಪಾಯಿ ಅನ್ನು ಮುಖ್ಯಮಂತ್ರಿ ನಿಶ್ಚಯ ಸ್ವಯಂ ಸಹಾಯ ಭತ್ಯೆ ಯೋಜನೆ ಅಡಿಯಲ್ಲಿ ನೀಡುವುದಾಗಿ ಘೋಷಿಸಿದ್ದಾರೆ.

ಈ ಮುಂಚೆ ಈ ಯೋಜನೆ ಕೇವಲ ಇಂಟರ್​ಮಿಡಿಯೇಟ್​ ಪರೀಕ್ಷೆ ಪಾಸ್​ ಆದ ನಿರುದ್ಯೋಗಿಗಳಿಗೆ ಮಾತ್ರ ನೀಡಲಾಗುತ್ತಿತ್ತು. ಈ ಕುರಿತು ಎಕ್ಸ್​ ಜಾಲತಾಣದಲ್ಲಿ ಪೋಸ್ಟ್​ ಮಾಡಿರುವ ನಿತೀಶ್​ ಕುಮಾರ್, ರಾಜ್ಯ ಸರ್ಕಾರದ ಏಳು ಪರಿಹಾರಗಳ ಕಾರ್ಯಕ್ರಮದಡಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಮುಖ್ಯಮಂತ್ರಿ ನಿಶ್ಚಯ ಸ್ವಯಂ ಸಹಾಯ ಭತ್ಯೆ ಯೋಜನೆಯನ್ನು ಈಗ ವಿಸ್ತರಿಸಲಾಗಿದೆ.

ಈ ಮೊದಲು ಇಂಟರ್​ಮಿಡಿಯೇಟ್​ ಪಾಸ್​​ ಆದವರಿಗೆ ನೀಡಲಾಗುತ್ತಿದ್ದ ಸ್ವ-ಸಹಾಯ ಭತ್ಯೆ ಯೋಜನೆಯ ಪ್ರಯೋಜನವನ್ನು ಈಗ ಕಲೆ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಪಾಸಾದ ನಿರುದ್ಯೋಗಿ ಪದವೀಧರ ಯುವಕರಿಗೂ ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಉದ್ಯೋಗಕ್ಕಾಗಿ ಎದುರು ನೋಡುತ್ತಿರುವ ಯಾವುದೇ ಸ್ವಯಂ ಉದ್ಯೋಗ ಹೊಂದಿರದ ಅಥವಾ ಸರ್ಕಾರಿ ಉದ್ಯೋಗ ಅಥವಾ ಸರ್ಕಾರೇತರ ಉದ್ಯೋಗ ಪಡೆಯದ ಯಾವುದೇ ಅಧ್ಯಯನ ನಡೆಸದ 20 ರಿಂದ 25 ವರ್ಷದ ಯುವ ಜನರು ಸಹ ಮುಖ್ಯಮಂತ್ರಿ ನಿಶ್ಚಯ ಸ್ವಯಂ ಸಹಾಯ ಭತ್ಯೆ ಯೋಜನೆ ಫಲಾನುಭವಿಗಳಾಗಬಹುದು. ಈ ಯೋಜನೆಯಲ್ಲಿ ಅವರಿಗೆ ಎರಡು ವರ್ಷಗಳ ಕಾಲ ಮಾಸಿಕ 1000 ರೂ. ಒದಗಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

2025 ರ ನವೆಂಬರ್​ನಲ್ಲಿ ಹೊಸ ಸರ್ಕಾರ ರಚನೆಯಾದ ಬಳಿಕ ಹೆಚ್ಚೆಚ್ಚು ಯುವಕರಿಗೆ ಸರ್ಕಾರಿ ಉದ್ಯೋಗಗಳು ಮತ್ತು ಉದ್ಯೋಗವನ್ನು ಒದಗಿಸುವ ಹಾಗೂ ಅವರನ್ನು ಸಬಲೀಕರಣಗೊಳಿಸುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ.

ಮುಂದಿನ ಐದು ವರ್ಷಗಳಲ್ಲಿ ಒಂದು ಕೋಟಿ ಯುವಕರಿಗೆ ಸರ್ಕಾರಿ ಉದ್ಯೋಗಗಳು ಮತ್ತು ಇತರೆ ಉದ್ಯೋಗಗಳನ್ನು ಒದಗಿಸುವ ಗುರಿಯನ್ನು ಹೊಂದಲಾಗಿದೆ. ಮುಂದಿನ ದಿನಗಳಲ್ಲಿ, ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಹೆಚ್ಚಿನ ಸಂಖ್ಯೆಯ ಹೊಸ ಉದ್ಯೋಗಗಳು ಮತ್ತು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ.

ಈ ಗುರಿಯನ್ನು ಸಾಧಿಸಲು, ಯುವಕರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ನೀಡಲಾಗುತ್ತಿದೆ. ಇದರಿಂದ ಅವರು ಉದ್ಯೋಗ ಪಡೆಯಬಹುದು ಎಂದು ತಿಳಿಸಿದ್ದಾರೆ.


Share It

You cannot copy content of this page