ಅಪರಾಧ ಸುದ್ದಿ

ಅಯ್ಯಪ್ಪನ ಮೇಲಿದ್ದ 4.54 K.G.ಚಿನ್ನ ಮಾಯ

Share It

ಕೊಚ್ಚಿ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿದ್ದ 4.54 ಕೆ.ಜಿ. ಚಿನ್ನ ಕಳುವಾಗಿದ್ದು, ಪ್ರಕರಣ ನ್ಯಾಯಲಯದ ಮೆಟ್ಟಿಲೇರಿದೆ.

2019 ರಲ್ಲಿ ರಿಪ್ಲೇಟಿಂಗ್ ಮಾಡಿದ್ದು, 42.8 ಕೆ.ಜಿ. ಚಿನ್ನದ ಲೇಪನ ಮಾಡಲಾಗಿತ್ತು. ಇದೀಗ ಅದರಲ್ಲಿ 4.54 ಕೆ.ಜಿ. ಚಿನ್ನ ನಾಪತ್ತೆಯಾಗಿದೆ. ಇದೀಗ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಿದ್ದು, ನ್ಯಾಯಾಲಯ ಘಟನೆ ಬಗ್ಗೆ ಕಳವಳ ವ್ಯಕ್ತಪಡಿಸಿ, ವಿಜಿಲೆನ್ಸ್ ತನಿಖೆಗೆ ಆದೇಶ ಮಾಡಿದೆ.

ಕಳವಿನ ನಂತರ ದೇವಸ್ಥಾನದ ದ್ವಾರಪಾಲಕರ ಮೇಲಿದ್ದ ಚಿನ್ನದ ಲೇಪನದ ತೂಕ 38.258 ಕೆ.ಜಿ.ಗೆ ಇಳಿದಿದೆ. ಇದು ಕಳವಳಕಾರಿ ಘಟನೆಯಾಗಿದ್ದು, ಇದಕ್ಕೆ ಸಂಬಂಧಿಸಿ ವಿಜಿಲೆನ್ಸ್ ತನಿಖೆ ನಡೆಸಿ, ವರದಿ ನೀಡಬೇಕು ಎಂದು ಆದೇಶ ನೀಡಿದೆ.


Share It

You cannot copy content of this page