ಮೈಸೂರು: ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ಉತ್ಸವಮೂರ್ತಿಗೆ ದೀಪ ಬೆಳಗಿ ಪುಷ್ಪಾರ್ಚನೆ ಮಾಡುವ ಮೂಲಕ ಲೇಖಕಿ ಬಾನು ಮುಸ್ತಾಕ್ ನಾಡಹಬ್ಬ ಮೈಸೂರು ದಸರಾವನ್ನು ಉದ್ಘಾಟಿಸಿದರು.
ಈ ಮೂಲಕ 11 ದಿನಗಳ ಮೈಸೂರು ದಸರಾ ಕಾರ್ಯಕ್ರಮಗಳಿಗೆ ಅಧಿಕೃತವಾಗಿ ಚಾಲನೆ ದೊರಕಿತು. ವಿಶೇಷವಾಗಿ ಹಸಿರು ಕುಪ್ಪಸ, ಹಳದಿ ಸೀರೆಯಲ್ಲಿ ಬಾನು ಮುಸ್ತಾಕ್ ಚಾಮುಂಡೇಶ್ವರಿ ದೇವಿ ದರ್ಶನ ಪಡೆದು ನಾಡಹಬ್ಬ ಮೈಸೂರು ದಸರಾ- ೨೦೨೫ ಅನ್ನು ಉದ್ಘಾಟಿಸಿದರು.
ಇದಕ್ಕೂ ಮುನ್ನ ಸಿಎಂ, ಉಸ್ತುವಾರಿ ಸಚಿವರು, ಜಿಲ್ಲಾಡಳಿತದ ತಂಡದೊಂದಿಗೆ ಬಾನು ಮುಷ್ಕಾಕ್ ಪೊಲೀಸ್ ಭದ್ರತೆಯೊಂದಿಗೆ ಚಾಮುಂಡಿ ಬೆಟ್ಟಕ್ಕೆ ಆಗಮಿಸಿದರು. ಅವರ ಕುಟುಂಬಸ್ಥರು ಪ್ರತ್ಯೇಕ ಬಸ್ನಲ್ಲಿ ಆಗಮಿಸಿದರು. ಸಚಿವರು, ಸ್ಥಳೀಯ ಶಾಸಕರು ಭಾಗವಹಿಸಿದ್ದರು.