ಸುದ್ದಿ

ಇಂದು ಭೈರಪ್ಪರಿಗೆ ಇಂದು ಅಂತಿಮ ವಿದಾಯ

Share It

ಮೈಸೂರು: ಖ್ಯಾತ ಸಾಹಿತಿ ಎಸ್​​.ಎಲ್.ಭೈರಪ್ಪ ಅವರ ಅಂತ್ಯಕ್ರಿಯೆ ಇಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನ ಹರಿಚ್ಚಂದ್ರ ಘಾಟ್‌ನಲ್ಲಿ ಹಿಂದೂ ಸಂಪ್ರದಾಯದಂತೆ ನಡೆಯಲಿದೆ.

ಇಂದು ಭೈರಪ್ಪ ಅವರ ಕುವೆಂಪುನಗರದ ನಿವಾಸದಲ್ಲಿ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಇಂದು ಬೆಳಿಗ್ಗೆ 10:30 ರವರೆಗೆ ಅವರ ನಿವಾಸದಲ್ಲಿ ಅಂತಿಮ ದರ್ಶನ ಪಡೆಯಬಹುದು. ಬಳಿಕ 11 ಗಂಟೆಯ ನಂತರ ಪಾರ್ಥಿವ ಶರೀರವನ್ನು ಹರಿಚ್ಚಂದ್ರ ಘಾಟ್‌ಗೆ ಕೊಂಡೊಯ್ಯಲಾಗುತ್ತದೆ.

ಇಂದಿನ ಅಂತ್ಯಕ್ರಿಯೆಯ ವಿಧಿವಿಧಾನಗಳು ಸರಳವಾಗಿ ಗೌರವಯುತವಾಗಿ ನಡೆಯಲಿವೆ. ಕುವೆಂಪುನಗರದ ಭೈರಪ್ಪ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಅವರ ಅಭಿಮಾನಿಗಳು, ಓದುಗರು, ಸಾಹಿತ್ಯಾಸಕ್ತರು ಹಾಗೂ ಸಾಹಿತಿಗಳು ಈ ಸಂದರ್ಭದಲ್ಲಿ ಗೌರವ ಸಲ್ಲಿಸಲಿದ್ದಾರೆ.


Share It

You cannot copy content of this page