ಯಾದಗಿರಿ: ಪತ್ನಿಯ ಶೀಲ ಶಂಕಿಸಿ ತಂದೆ ತನ್ನ ಎರಡು ಮಕ್ಕಳನ್ನು ಕೊಡಲಿಯಿಂದ ಹತ್ಯೆ ಮಾಡಿರುವ ಘಟನೆ ತಾಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಪತ್ನಿ ಮನೆಯಲ್ಲಿದ ಸಂದರ್ಭ ಆರೋಪಿ ಶರಣಪ್ಪ ಮಲಗಿದ್ದ ಮಕ್ಕಳ ಮೇಲೆ ಕ್ರೌರ್ಯ ಮೆರೆದಿದ್ದಾನೆ.
ಮಕ್ಕಳಾದ ಸಾನ್ವಿ (೫), ಭರತ (೩) ಸಾವನ್ನಪ್ಪಿದ್ದು, ಮತ್ತೋರ್ವ ಮಗ ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪತ್ನಿ ಜಯಮ್ಮ ಯಾದಗಿರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಘಟನಾ ಸ್ಥಳಕ್ಕೆ ಯಾದಗಿರಿ ಉಪವಿಭಾಗದ ಡಿವೈಎಸ್ಪಿ ಸುರೇಶ್ ನಾಯಕ್, ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐ ಹಣಮಂತ ಬಂಕಲಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪರಾರಿಯಾಗಿದ್ದ ಆರೋಪಿ ಶರಣಪ್ಪ ಗ್ರಾಮದ ಗುಡ್ಡಗಾಡುಗಳಲ್ಲಿ ಅಡಗಿ ಕುಳಿತ್ತಿದ್ದ. ಅವನನ್ನು ಪೊಲೀಸರು ಪತ್ತೆ ಹಚ್ಚಿ ವಶಕ್ಕೆ ಪಡೆದಿದ್ದಾರೆ.