ಅಪರಾಧ ಸುದ್ದಿ

ಇನೋವಾ ಕಾರಿನ ಮೇಲೆ ಮುಗುಚಿ ಬಿದ್ದ ಕಂಟೇನರ್, ಓರ್ವ ಸ್ಥಳದಲ್ಲೇ ಸಾವು : ನಾಲ್ವರಿಗೆ ಗಾಯ

Share It

ಸಂಕೇಶ್ವರ : ಹೆದ್ದಾರಿಯ ಒಂದು ಬದಿಯಲ್ಲಿ ಹೊರಟಿದ್ದ ಕಂಟೇನರ್ ಲಾರಿಯೊಂದು ಇನ್ನೊಂದು ಬದಿಯ ರಸ್ತೆಯಲ್ಲಿ ಹೊರಟಿದ್ದ ಇನೋವಾ ಕಾರಿನ‌ ಮೇಲೆ ಮುಗುಚಿ ಬಿದ್ದ ಪರಿಣಾಮವಾಗಿ ವ್ಯಕ್ತಿಯೋರ್ವ ಸ್ಥಳದಲ್ಲೇ ಮೃತಪಟ್ಟು ನಾಲ್ವರು ಗಾಯಗೊಂಡ ಘಟನೆ ಹುಕ್ಕೇರಿ ತಾಲೂಕಿನ ಕಣಗಲಾ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ರಾತ್ರಿ ನಡೆದಿದೆ.

ನಿಪ್ಪಾಣಿ ಕಡೆಯಿಂದ ಸಂಕೇಶ್ವರ ಕಡೆಗೆ ಬರುತ್ತಿದ್ದ ಕಂಟೇನರ್ ಲಾರಿಯು ಬೆಳಗಾವಿ ಕಡೆಯಿಂದ ನಿಪ್ಪಾಣಿ ಕಡೆಗೆ ತೆರಳುತ್ತಿದ್ದ ಇನೋವಾ ವಾಹನದ ಮೇಲೆ ಮುಗಳಿ ಬಿದ್ದ ಪರಿಣಾಮ ಇನೋವಾ ವಾಹನದಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರೊಬ್ಬರು ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮೃತರು ಮಹಾರಾಷ್ಟ್ರದ ಸಾತಾರಾ ಜಿಲ್ಲೆಯವರು ಎಂದು ತಿಳಿದಿದೆ.
ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Share It

You cannot copy content of this page