ಅಪರಾಧ ಸುದ್ದಿ

Bengaluru: ಪತ್ನಿಯ ಕೊಂದು ಪತಿ ಆತ್ಮಹತ್ಯೆ

Share It

ಬೆಂಗಳೂರು: ಉಲ್ಲಾಳದ ಗೌರ್ನಮೆಂಟ್ ಪ್ರೆಸ್ ಲೇಔಟ್‌ನಲ್ಲಿ ಪತ್ನಿಗೆ ಇರಿದು ಪತಿಯೂ ಫ್ಯಾನ್‌ಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮಂಜು (28) ಕೊಲೆಯಾದ ಮಹಿಳೆ. ಅವರ ಪತಿ, ತಮಿಳುನಾಡಿನ ಪಿನ್ನಲವಾಡಿ ಗ್ರಾಮದ ಧರ್ಮಶೀಲನ್ ಅವರು ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಂಜು ಅವರ ತಂದೆ ಪೆರಿಸ್ವಾಮಿ ಅವರು ನೀಡಿದ ದೂರು ಆಧರಿಸಿ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು. ಜ್ಞಾನಭಾರತಿ ಠಾಣೆಯಲ್ಲಿ ಕೊಲೆ ಹಾಗೂ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.

ಪರಸ್ಪರ ಪ್ರೀತಿಸಿ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ಧರ್ಮಶೀಲನ್ ಮತ್ತು ಮಂಜು ದಂಪತಿಯು ಪ್ರೆಸ್ ಲೇಔಟ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ದುಬೈನಲ್ಲಿ ಪೇಂಟಿಂಗ್ ಕೆಲಸ ಮಾಡುತ್ತಿದ್ದ ಧರ್ಮಶೀಲನ್, ಕೆಲವು ತಿಂಗಳ ಹಿಂದೆ ಬೆಂಗಳೂರಿಗೆ ವಾಪಸ್ ಬಂದಿದ್ದರು.

ಪತಿ ದುಬೈಗೆ ಹೋದ ನಂತರ ನಗರದಲ್ಲಿಯೇ ನೆಲಸಿದ್ದ ಮಂಜು ಅವರು ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಧರ್ಮಶೀಲ ಅವರು ದುಬೈನಿಂದ ವಾಪಸ್ ಬಂದು, ಪತ್ನಿಯನ್ನು ತಮಿಳುನಾಡಿನ ಸ್ವಂತ ಗ್ರಾಮಕ್ಕೆ ಕರೆದುಕೊಂಡು ಹೋಗಿದ್ದರು. ಹದಿನೈದು ದಿನ ತಮಿಳುನಾಡಿನಲ್ಲಿದ್ದು ದಂಪತಿ ಸುತ್ತಾಟ ನಡೆಸಿದ್ದರು.

ಮೂರು ದಿನಗಳ ಹಿಂದೆ ಇಬ್ಬರೂ ಬೆಂಗಳೂರಿಗೆ ವಾಪಸ್ ಬಂದಿದ್ದರು. ಭಾನುವಾರ ರಾತ್ರಿ ಕೊಲೆ ಹಾಗೂ ಆತ್ಮಹತ್ಯೆಯ ಘಟನೆ ನಡೆದಿದೆ ಎಂಬುದಾಗಿ ದೂರು ನೀಡಲಾಗಿದೆ. ತನಿಖೆ ನಡೆಯುತ್ತಿದೆ’ ಎಂದು ಪೊಲೀಸರು ಹೇಳಿದರು. ಬೆಂಗಳೂರಿಗೆ ವಾಪಸ್ ಬಂದಿದ್ದರು. ಭಾನುವಾರ ರಾತ್ರಿ ಕೊಲೆ ಹಾಗೂ ಆತ್ಮಹತ್ಯೆಯ ಘಟನೆ ನಡೆದಿದೆ ಎಂಬುದಾಗಿ ದೂರು ನೀಡಲಾಗಿದೆ. ತನಿಖೆ ನಡೆಯುತ್ತಿದೆ’ ಎಂದು ಪೊಲೀಸರು ಹೇಳಿದರು.

‘ಧರ್ಮಶೀಲನ್ ಅವರು ದುಬೈನಿಂದ ನಗರಕ್ಕೆ ಬಂದ ಮೇಲೆ ಗಾರೆ ಕೆಲಸ ಮಾಡುತ್ತಿದ್ದರು. ಪ್ರತಿನಿತ್ಯ ಪಾನಮತ್ತರಾಗಿ ಮನೆಗೆ ಬಂದು ಪತ್ನಿಯ ಜತೆ ಜಗಳವಾಡುತ್ತಿದ್ದರು. ಪತ್ನಿ ಕೆಲಸಕ್ಕೆ ಹೋಗುವುದು ಧರ್ಮಶೀಲನ್ ಅವರಿಗೆ ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ಆತ ಪತ್ನಿಯೊಂದಿಗೆ ಪದೇಪದೇ ಜಗಳ ಮಾಡುತ್ತಿದ್ದರು.

ಭಾನುವಾರ ರಾತ್ರಿ ದಂಪತಿ ಜಗಳವಾಡಿದ್ದಾರೆ. ಬಳಿಕ ಜಗಳ ವಿಕೋಪಕ್ಕೆ ತಿರುಗಿ, ಧರ್ಮಶೀಲನ್ ಅಡುಗೆ ಕೋಣೆಯಲ್ಲಿದ್ದ ಚಾಕುವಿನಿಂದ ಪತ್ನಿಯ ಕತ್ತು ಕೊಯ್ದು ೫೦ಕ್ಕೂ ಹೆಚ್ಚು ಬಾರಿ ಇರಿದಿದ್ದರು. ಪತ್ನಿಯ ಸಾವಿನ ಬಳಿಕ ಧರ್ಮಶೀಲನ್ ಅವರು, ಮನೆಯ ಫ್ಯಾನ್‌ಗೆ ನೇಣು ಹಾಕಿಕೊಂಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ’ ಎಂದು ಪೊಲೀಸರು ಹೇಳಿದರು.

ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬ ಸದಸ್ಯರಿಗೆ ಮೃತದೇಹಗಳನ್ನು ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಹೇಳಿದರು.


Share It

You cannot copy content of this page