ತುಮಕೂರು: ಖಾಸಗಿ ಬಸ್ ಕಾರಿನ ನಡುವೆ ಅಪಘಾತ ಸಂಭವಿಸಿ ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ.
ತುಮಕೂರು ತಾಲೂಕಿನ ಬೆಳಧರ ಗೇಟ್ ಬಳಿ ದುರಂತ ಸಂಭವಿಸಿದ್ದು, ತುಮಕೂರಿನಿಂದ ಪಾವಗಡಕ್ಕೆ ತೆರಳುತಿದ್ದ ಖಾಸಗಿ ಬಸ್ ಹಾಗೂ ಧರ್ಮಸ್ಥಳಕ್ಕೆ ತೆರಳುತ್ತಿದ್ದವರ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೋರ್ವ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.
ಮೃತರನ್ನು ಕತ್ತಿನಾಗೇನಹಳ್ಳಿಯ ಶಿವಕುಮಾರ್ (೨೮), ಬೈಚಾಪುರದ ಶಿವಶಂಕರ್ (೨೮) ಹಾಗೂ ಗೋವಿಂದಪ್ಪ (೬೦) ಮೃತರು. ಇನ್ನು, ರೆಡ್ಡಿಹಳ್ಳಿಯ ಶಂಕರ್ ಹಾಗೂ ಕತ್ತಿನಾಗೇನಹಳ್ಳಿಯ ವೇಣುಗೋಪಾಲ್ ಗಂಭೀರ ಗಾಯಗೊಂಡಿದ್ದಾರೆ.
ಅಪಘಾತದ ಬಳಿಕ ಖಾಸಗಿ ಬಸ್ ಚಾಲಕ ಪರಾರಿಯಾಗಿದ್ದಾನೆ. ಸ್ಥಳಕ್ಕೆ ತುಮಕೂರು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.