ರಾಜಕೀಯ ಸುದ್ದಿ

ಕುರುಬ ಸಮುದಾಯವನ್ನು ಎಸ್​ಟಿಗೆ ಸೇರಿಸಿದರೆ ಸುಮ್ಮನೆ ಇರುವುದಿಲ್ಲ

Share It

ಸಿಎಂ ಸಿದ್ದರಾಮಯ್ಯ ಮುಂದೆಯೇ ವಿ.ಎಸ್​ ಉಗ್ರಪ್ಪ ಗುಡುಗು

ಬೆಂಗಳೂರು: ಕುರುಬ ಸಮುದಾಯವನ್ನು ಎಸ್​ಟಿಗೆ ಸೇರಿಸಿದರೆ ಸುಮ್ಮನ ಇರುವುದಿಲ್ಲ ಎಂದು ಕಾಂಗ್ರೆಸ್​ ನಾಯಕ ವಿ.ಎಸ್​ ಉಗ್ರಪ್ಪ ಸಿಎಂ ವಿರುದ್ಧಗುಡುಗಿದ್ದಾರೆ.

ವಾಲ್ಮೀಕಿ ಜಯಂತಿ ಸಂದರ್ಭದಲ್ಲಿ ಭಾಷಣದ ವೇಳೆ ಸಿಎಂ ಸಿದ್ದರಾಮಯ್ಯ ಮುಂದೆಯೇ ವಿ.ಎಸ್​ ಉಗ್ರಪ್ಪ ಗುಡುಗಿದ್ದಾರೆ. ಸಿದ್ದರಾಮಯ್ಯ ನವರೇ, ನಮ್ಮ ತಟ್ಟೆಯನ್ನು ಕಿತ್ತುಕೊಳ್ಳೋಕೆ ಹೋಗಬೇಡಿ. ನಮ್ಮ ಜೊತೆ ಸಹಪಂಥಿಯಲ್ಲಿ ಕೂರಬೇಕಾದರೆ ಕುಲಶಾಸ್ತ್ರೀಯ ಅಧ್ಯಯನ ಮಾಡಿಸಿ ಎಂದು ಉಗ್ರಪ್ಪ ಅವರು ಕಿಡಿ ಕಾರಿದ್ದಾರೆ.

ಈ ಹೇಳಿಕೆಯು ರಾಜ್ಯದ ಮೀಸಲಾತಿ ವಿವಾದವನ್ನು ಮತ್ತೊಮ್ಮೆ ಉಚ್ಚರಿಸಿದ್ದು, ಸಾಮಾಜಿಕ ನ್ಯಾಯದ ಬಗ್ಗೆ ಚರ್ಚೆಗೆ ಧಕ್ಕೆ ತಂದಿದೆ. ಉಗ್ರಪ್ಪ ಮಾತನಾಡಿ, ಕುರುಬರನ್ನು ಎಸ್‌ಟಿಗೆ ಸೇರಿಸಿದರೆ ಸುಮ್ಮನೆ ಇರುವುದಿಲ್ಲ. ಕೇಂದ್ರ ಸರ್ಕಾರವನ್ನು ಒತ್ತಾಯ ಮಾಡುತ್ತೇನೆ. 14 ಪರ್ಸೆಂಟ್ ಮೀಸಲಾತಿ ಮಾಡಿದರೆ ನಮಗೇನು ಅಭ್ಯಂತರವಿಲ್ಲ. ನಮಗೂ ರಾಜಕೀಯ ಮೀಸಲಾತಿ ಬೇಕು ಎಂದು ಹೇಳಿದ್ದಾರೆ.

ಇದಲ್ಲದೆ, ಸಿದ್ದರಾಮಯ್ಯನವರೇ, ನಿಮಗೆ ಕೈ ಮುಗಿತ್ತೀನಿ. ಎಷ್ಟು ವರ್ಷ ಆದರೂ ನೀವು ಮಾಜಿ ಆಗಲೇಬೇಕು. ನಮ್ಮ ತಟ್ಟೆಗೆ ಕೈ ಹಾಕಿದರೆ, ಜನರ ಜೊತೆಯಲ್ಲಿ ನಿಂತು ಹೋರಾಟ ಮಾಡುತ್ತೇವೆ ಎಂದು ತೀಕ್ಷ್ಣವಾಗಿ ಎಚ್ಚರಿಸಿದ್ದಾರೆ.

ಶೋಷಿತ ಸಮುದಾಯದ ಪರ ನಾನು: ವಾಲ್ಮೀಕಿ ಸಮುದಾಯದ ಹಿರಿಯ ನಾಯಕರಾಗಿರುವ ಉಗ್ರಪ್ಪ ಭಾಷಣದಲ್ಲಿ, ಕೆಲವರನ್ನು ಎಸ್‌ಸಿಗೆ ಸೇರಿಸಿ, ಮತ್ತೆ ಕೆಲವರನ್ನು ಎಸ್‌ಟಿಗೆ ಸೇರಿಸುತ್ತಾರೆ. ವಾಲ್ಮೀಕಿ ಜಾತಿ ಬಯಸಿದ್ದು ಅಲ್ಲ. ೩೪೧ ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದವರನ್ನು ಎಸ್‌ಸಿಯಾಗಿ ಮಾಡಬೇಕು ಎಂದು ಸಿಎಂಗೆ ಸಲಹೆ ನೀಡಿದ್ದಾರೆ.

ಕ್ಷೌರಿಕ ಸಮಾದವರನ್ನು ನೋಡಿದರೆ ಕೆಲಸ ಆಗಲ್ಲ ಎಂದು ಹೇಳುತ್ತಾರೆ, ಅದು ಅಸ್ಪೃಶ್ಯತೆ. ಎಸ್‌ಸಿ ಜಾತಿಗಳ ಸೇರ್ಪಡೆಗೆ ಕುರುಬರು, ಗೊಲ್ಲರು ಸೇರಿದಂತೆ ಅನೇಕರು ಕೇಳುತ್ತಿದ್ದಾರೆ ಎಂದು ಅವರು ಟೀಕಿಸಿದ್ದಾರೆ. ಮೀಸಲಾತಿಯು ಯಾವುದೇ ಜಾತಿಯ ಆಸ್ತಿಯಲ್ಲ, ವಂಚಿತರಿಗೆ ಸಿಗಬೇಕು ಎಂದು ಒತ್ತಾಯಿಸಿದ ಉಗ್ರಪ್ಪ, ನಾಯಕ ಸಮುದಾಯದ ಸಚಿವರು ಮೀಸಲಾತಿಯಿಂದ ಆಯ್ಕೆಯಾಗಿದ್ದೀರಿ. ಸಮಾಜದ ಋಣ ತೀರಿಸಬೇಕು ಎಂದು ಹೇಳಿದ್ದಾರೆ.

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಬೊಮ್ಮಾಯಿ ಕುರುಬರನ್ನು ಎಸ್‌ಸಿಗೆ ಸೇರ್ಪಡೆಗೆ ಮುಂದಾಗಿದ್ದರು, ಆದರೆ ಸಿದ್ದರಾಮಯ್ಯ ಅವರು ಇದ್ದನ್ನು ಮಾಡಿಲ್ಲ ಎಂದು ಉಗ್ರಪ್ಪ ಆರೋಪಿಸಿದ್ದಾರೆ. ನಮ್ಮ ತಟ್ಟೆಯ ಅನ್ನ ಕಿತ್ತುಕೊಳ್ಳೋಕೆ ಹೋಗಬೇಡಿ. ಎಸ್‌ಸಿಯಾಗಬೇಕು ಎಂಬುದಕ್ಕೆ ಕುಲಶಾಸ್ತ್ರ ಅಧ್ಯಯನ ಮಾಡಬೇಕು. ನಾವು ೭% ಇದ್ದೇವೆ, ನೀವು ಸೇರಿದರೆ 14% ಮೀಸಲಾತಿ ಮಾಡಿ, ಆಗ ನಮ್ಮ ಅಭ್ಯಂತರ ಇಲ್ಲ” ಎಂದು ಸಿಎಂಗೆ ಸಲಹೆ ನೀಡಿದ್ದಾರೆ.

ಉಗ್ರಪ್ಪ ದೇವರಾಜ್ ಅರಸು ಮಾರ್ಗವನ್ನು ಅನುಸರಿಸಬೇಕು ಎಂದು ಸಿಎಂಗೆ ಸಲಹೆ ನೀಡಿದ್ದು, ಕುರುಬರು, ಬೆಸ್ತರು ಬರುವಾಗ ಪ್ಲೇಟು ಅನ್ನ ತಂದು ನಮ್ಮ ಜತೆಯಲ್ಲಿ ಕುಳಿತು ಊಟ ಮಾಡಬೇಕು, ಆಗ ನಾವು ಸ್ವಾಗತ ಮಾಡುತ್ತೇವೆ. ಹಾಗೆ ಮಾಡದೇ ತಟ್ಟೆಗೆ ಕೈ ಹಾಕಿದರೆ ಜನಾಂಗದ ಪರ ಹೋರಾಟ ಮಾಡುತ್ತೇನೆ ಎಂದು ಎಚ್ಚರಿಸಿದ್ದಾರೆ.


Share It

You cannot copy content of this page