ಜಿಲ್ಲೆ ಸುದ್ದಿ

ಅರಕಲಗೂಡಿನಲ್ಲಿ BSP ಮೈಸೂರು  ವಲಯಮಟ್ಟದ ಸಮಾವೇಶ: ಚನ್ನರಾಯಪಟ್ಟಣ ದಿಂದ ಹೊರಟ ಕಾರ್ಯಕರ್ತರು

Share It

ಚನ್ನರಾಯಪಟ್ಟಣ: ಹಾಸನ ಜಿಲ್ಲೆಯ ಅರಕಲಗೂಡು ಪಟ್ಟಣದಲ್ಲಿ ನಡೆಯುತ್ತಿರುವ ಮೈಸೂರು ವಲಯದ BSP ಸಮಾವೇಶಕ್ಕೆ ಭಾಗವಹಿಸಲು ಚನ್ನರಾಯಪಟ್ಟಣ ತಾಲೂಕು ಕಾರ್ಯಕರ್ತರು ಬಸ್ ಗಳಲ್ಲಿ ಹೊರಟರು.

ತಾಲೂಕು ಅಧ್ಯಕ್ಷರಾದ ರಾಜು ಕುಂದೂರು ಹಾಗೂ ಜಿಲ್ಲಾ ಕಾರ್ಯದರ್ಶಿ ಸಿದ್ದಲಿಂಗಯ್ಯ ನೇತೃತ್ವದಲ್ಲಿ ಬಸ್ ಗಳಲ್ಲಿ ಹೊರಟ ಕಾರ್ಯಕರ್ತರಿಗೆ ನೀಲಿ ಬಾವುಟದ ಮೂಲಕ ಚಾಲನೆ ನೀಡಲಾಯಿತು. ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯ ಕಾರ್ಯಕರ್ತರು ಭಾಗವಹಿಸಬೇಕೆಂಬ ಅಭಿಲಾಷೆಯಲ್ಲಿ ಹೊರಡಲಾಗಿದೆ ಎಂದು ರಾಜು ಕುಂದೂರು ತಿಳಿಸಿದರು.

ಪ್ರಧಾನ ಕಾರ್ಯದರ್ಶಿ ಬಸವರಾಜು ಬದ್ದೀಕೆರೆ, ತಾಲ್ಲೂಕು ಕಚೇರಿ ಕಾರ್ಯದರ್ಶಿ ಸಂತೋಷ್, ಶಿವಣ್ಣ ಕಗ್ಗೆರೆ, ಕಬ್ಬಳ್ಳಿ ಉಮೇಶ್, ಶಿವಣ್ಣ ಮೊದಲಾದವರು ಇದ್ದರು.


Share It

You cannot copy content of this page