ಅಪರಾಧ ಸುದ್ದಿ

ಪ್ರೇಮಿಯ ಲೈಂಗಿಕ ಕಿರುಕುಳಕ್ಕೆ ಬೇಸತ್ತು ಸೀರೆಯಿಂದ ನೇಣು ಬಿಗಿದು ಬಾಲಕಿ ಆತ್ಮಹತ್ಯೆ

Share It

ಖಾನಾಪುರ: ಪ್ರೀತ್ಸೆ ಎಂದು ಪೀಡಿಸಿದ್ದಕ್ಕೆ ಮನನೊಂದು ಯುವತಿಯೊಬ್ಬಳು ಮನೆಯಲ್ಲಿ ಯಾರೂ ಇಲ್ಲದ ವೇಳೆ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಸಂಜೆ ಖಾನಾಪುರ ತಾಲೂಕಿನ ದೇವಲತ್ತಿ ಗ್ರಾಮದಲ್ಲಿ ನಡೆದಿದೆ.

ದೇವಲತ್ತಿ ಗ್ರಾಮದ ಅಶ್ವಿನಿ ಕೋಲಕಾರ (17) ಎಂಬ ಬಾಲಕಿಗೆ ನಂದಳ್ಳಿ ಗ್ರಾಮದ ರತನ ಪಾಟೀಲ (26 ) ಎಂಬ ಯುವಕ ಕಳೆದ ಒಂದು ವರ್ಷದಿಂದ ತನ್ನನ್ನು ಪ್ರೀತಿಸುವಂತೆ ಇಲ್ಲವಾದಲ್ಲಿ ನಿನ್ನನ್ನು ಬಿಡುವುದಿಲ್ಲ ಎಂದು ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗುತ್ತಿದೆ.

ಇದರಿಂದ ಮನನೊಂದು ಬಾಲಕಿ ಗುರುವಾರ ಮಧ್ಯಾಹ್ನ ಯಾರೂ ಇಲ್ಲದ ವೇಳೆ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸುದ್ದಿ ತಿಳಿದು ಡಿವೈಎಸ್ಪಿ ವಿರೇಶ ಹಿರೇಮಠ ಹಾಗೂ ಖಾನಾಪುರ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಸಂಖ್ಯೆ 210/2025ರಂತೆ ಸಂ 306, 354(ಡಿ), 506 ಹಾಗೂ ಎಸ್‌.ಸಿ./ಎಸ್‌.ಟಿ. ತಿದ್ದುಪಡಿ ಕಾಯ್ದೆ 2015 ಅಡಿ ಪ್ರಕರಣ ದಾಖಲಿಸಿಕೊಂಡಿದ್ದು ಪೊಲೀಸ್ ತನಿಖೆ ಕೈಗೆತ್ತಿಕೊಂಡಿದ್ದು ಶವವನ್ನು ಶುಕ್ರವಾರ ಶವ ಪರೀಕ್ಷೆ ನಂತರ ಕುಟುಂಬಸ್ಥರಿಗೆ ಹಸ್ಥಾಂತರಿಸಲಾಗಿದೆ.


Share It

You cannot copy content of this page