ಸುದ್ದಿ

ಮಟ್ಟನವಿಲೆ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಕಾಂತರಾಜ್ ಅವಿರೋಧ ಆಯ್ಕೆ

Share It

ಚನ್ನರಾಯಪಟ್ಟಣ: ಮಟ್ಟನವಿಲೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮಟ್ಟನವಿಲೆ ನೂತನ ಉಪಾಧ್ಯಕ್ಷರಾಗಿ ಮಾದಿಹಳ್ಳಿ ಎಂ. ಎಸ್. ಕಾಂತರಾಜ್ ರವರು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ.

11 ಸದಸ್ಯರನ್ನೊಳಗೊಂಡ ಸಹಕಾರ ಸಂಘದ ಉಪಾಧ್ಯಕ್ಷ ಸ್ಥಾನ ಖಾಲಿಯಾಗಿದ್ದು, ಮಾದಿಹಳ್ಳಿಯ ಕಾಂತರಾಜು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಈ ವೇಳೆ ಅಧ್ಯಕ್ಷರಾದ ಗಂಗಾಧರ್ ಸೇರಿದಂತೆ ಎಲ್ಲ ನಿರ್ದೇಶಕರು ಭಾಗವಹಿಸಿದ್ದರು.

ಸಹಕಾರ ಸಂಘದ ಮುಂದೆ ನಿರ್ದೇಶಕರು ಹಾಗೂ ಮುಖಂಡರು ಉಪಾಧ್ಯಕ್ಷ ಕಾಂತರಾಜ್ ಅವರನ್ನು ಅಭಿನಂದಿಸಿದರು. ತಮ್ಮ ಅವಿರೋಧ ಆಯ್ಕೆಗೆ ಪಕ್ಷಾತೀತವಾಗಿ ಸಹಕರಿಸಿದ ನಿರ್ದೆಶಕರು ಮತ್ತು ಮುಖಂಡರಿಗೆ ಕಾಂತರಾಜ್ ಧನ್ಯವಾದ ಅರ್ಪಿಸಿದರು.


Share It

You cannot copy content of this page