ಬೆಳಗಾವಿ :ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡ ಐವರಿಗೆ ಚಾಕು ಇರಿದ ಘೋರ ಘಟನೆ ಶನಿವಾರ ನಡೆದಿದೆ.
ಗುರುನಾಥ ಒಕ್ಕುಂದ, ಸಚಿನ್ ಕಾಂಬಳೆ, ಲೋಕೇಶ್ ಬೆಟಗೇರಿ, ಮಹೇಶ್ ವಿನಾಯಕ ಮತ್ತು ನಜೀರ್ ಪಠಾಣ ಇವರು ಚಾಕುವಿನಿಂದ ಗಾಯಗೊಂಡವರು ಎಂದು ಗುರುತಿಸಲಾಗಿದೆ. ಇವರ ತಲೆ, ಹೊಟ್ಟೆ, ಬೆನ್ನು, ಗುದದ್ವಾರ ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಚಾಕು ಇರಿಯಲಾಗಿದೆ.
ಬೆಳಗಾವಿಯ ಸದಾಶಿವನಗರ ಲಕ್ಷ್ಮೀ ಕಾಂಪ್ಲೆಕ್ಸ್ ಬಳಿ ನೃತ್ಯ ಮಾಡುತ್ತಿದ್ದಾಗ ಏಕಾ ಏಕಿಯಾಗಿ ನುಗ್ಗಿದ ಗುಂಪು ಈ ಕೃತ್ಯ ಎಸಗಿದೆ. ಯುವಕರು ಬಿದ್ದು ಒದ್ದಾಡುತ್ತಿದ್ದಂತೆ ಚಾಕು ಇರಿದ ಗುಂಪು ಪರಾರಿಯಾಗಿದೆ. ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
